ಸ್ಥಳೀಯ ಸುದ್ದಿ

ಕಲ್ಲಿದ್ದಲು ಸಂಪನ್ಮೂಲದ ಸಮರ್ಥ ಬಳಕೆಯಿಂದ ದೇಶದಲ್ಲಿ ವಿದ್ಯುತ್ ಸ್ವಾವಲಂಬನೆ-ಶಾಸಕ ಅರವಿಂದ ಬೆಲ್ಲದ

ಧಾರವಾಡ

ಕಲ್ಲಿದ್ದಲು ಗಣಿಗಳ ಸಮರ್ಪಕ ಬಳಕೆಯಿಂದ ದೇಶದಲ್ಲಿ ವಿದ್ಯುತ್ ಸ್ವಾವಲಂಬನೆ ಸಾಧ್ಯವಾಗಿದೆ.ಹುಬ್ಬಳ್ಳಿ ಧಾರವಾಡ ಭೂ ಅಂತರ್ಗತ ವಿದ್ಯುತ್ ಕೇಬಲ್ ಅಳವಡಿಸುವ ಯೋಜನೆಯ ಪ್ರಸ್ತಾವನೆ ಸಲ್ಲಿಸಲಾಗಿದೆ.ಸರ್ಕಾರ ಅಗತ್ಯ ಅನುದಾನ ನೀಡಲಿದೆ‌.ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರ ನೆರವು ನೀಡುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಭಾರತ ಸರ್ಕಾರದ ವಿದ್ಯುತ್ ಸಚಿವಾಲಯ,ಇಂಧನ ಇಲಾಖೆ,ಜಿಲ್ಲಾಡಳಿತ ,ಕರ್ನಾಟಕ ವಿದ್ಯುಚ್ಛಕ್ತಿ ಪ್ರಸರಣ ನಿಗಮ‌ ನಿಯಮಿತ ಹಾಗೂ ಹೆಸ್ಕಾಂ ಸಹಯೋಗದಲ್ಲಿ ಇಂದು ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಪು ಸಭಾಂಗಣದಲ್ಲಿ ಏರ್ಪಡಿಸಿದ್ದ ವಿದ್ಯುತ್ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.


ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಜನರ ಮೂಲ‌ಸೌಕರ್ಯಗಳಾದ ಕುಡಿಯುವ ನೀರು,ಒಳಚರಂಡಿ,ವಿದ್ಯುತ್ ದೀಪ ಮೊದಲಾದ ವ್ಯವಸ್ಥೆಗಳನ್ನು ಸರ್ಕಾರ ಒದಗಿಸುತ್ತಿದೆ.ಕಲ್ಲಿದ್ದಲು ಗಣಿಗಳ ಹರಾಜಿನಲ್ಲಿ ನಡೆದ ಅಕ್ರಮ ತಡೆದು ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ವಿದ್ಯುತ್ ಸ್ವಾವಲಂಬಿಯಾಗಿಸಲು ಸಾಧ್ಯವಾಗಿದೆ.ದೇಶದಲ್ಲಿ ಹೇರಳವಾಗಿ ಕಲ್ಲಿದ್ದಲು ಸಂಪನ್ಮೂಲವಿದೆ.ಈ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ನೆರೆ ದೇಶಗಳಿಗೂ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುತ್ತಿದೆ.ರಾಜ್ಯದಲ್ಲಿ ವಿದ್ಯುತ್ ಪರಿವರ್ತಕ ಬ್ಯಾಂಕುಗಳ ಸ್ಥಾಪನೆ ಮೂಲಕ ರೈತರ ಪಂಪ್‌ಸೆಟ್‌ಗಳ ಸಮಸ್ಯೆಗೆ ತ್ವರಿತ ಸ್ಪಂದನೆ ಸಾಧ್ಯವಾಗಿದೆ. ರಸ್ತೆ,ಒಳಚರಂಡಿ ,ಮನೆ ಮನೆಗೆ ಕುಡಿಯುವ ನೀರು ಪೂರೈಸುವ ನಳಗಳ ಜೋಡಣೆ ಮೊದಲಾದ ಮೂಲ ಸೌಕರ್ಯಗಳ ಕಾರ್ಯ ದೇಶದಾದ್ಯಂತ ಭರದಿಂದ ನಡೆಯುತ್ತಿವೆ.ಹೆಸ್ಕಾಂ ವ್ಯಾಪ್ತಿಯಲ್ಲಿ ಈವರೆಗೆ ವಿದ್ಯುತ್ ಸಂಪರ್ಕವೇ ಇಲ್ಲದಿದ್ದ 30 ಹಳ್ಳಿಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಸೌಭಾಗ್ಯ ಯೋಜನೆಯಡಿ ಹೆಚ್ಚು ದಾಖಲೆಗಳನ್ನು ಗ್ರಾಹಕರಿಂದ ಪಡೆಯದೇ ಆಧಾರ್ ಕಾರ್ಡ್ ಪಡೆದು ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಜನಮನ್ನಣೆಗಳಿಸಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಭಾರತಿ ಡಿ ಮಾತನಾಡಿ,ಉಜ್ವಲ ಭಾರತ ಉಜ್ವಲ ಭವಿಷ್ಯ ಪವರ್ @2047 ಶೀರ್ಷಿಕೆಯಡಿ ಜುಲೈ 25 ರಿಂದ 30 ರವರೆಗೆ ದೇಶದಾದ್ಯಂತ ವಿದ್ಯುತ್ ಮಹೋತ್ಸವ ಜರುಗುತ್ತಿದೆ.ಇಂಧನ ಇಲಾಖೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ,ಬಡತನ ರೇಖೆಗಿಂತ ಕೆಳಗಿರುವ ಹಾಗೂ ಪರಿಶಿಷ್ಟ ಜಾತಿ ,ಪರಿಶಿಷ್ಠ ಪಂಗಡದ ಜನರಿಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ.ಯೋಜನೆಗಳ ಕುರಿತು ಫಲಾನುಭವಿಗಳ ಅನಿಸಿಕೆ ಸಂಗ್ರಹಿಸಲಾಗುತ್ತಿದೆ.ನೀರಾವರಿ ಪಂಪ್‌ಸೆಟ್ ಹೊಂದಿರುವ ರೈತರು ಎದುರಿಸುತ್ತಿದ್ದ ವಿದ್ಯುತ್ ಪರಿವರ್ತಕಗಳ ಸಮಸ್ಯೆ ನಿವಾರಿಸಲು ಟಿ.ಸಿ.ಬ್ಯಾಂಕ್‌ಗಳ ಮೂಲಕ ಕೃಷಿಕರಿಗೆ ತ್ವರಿತ ಸ್ಪಂದನೆ ನೀಡಲಾಗುತ್ತಿದೆ.ಗ್ರಾಮೀಣ ಭಾಗಕ್ಕೆ ಹೆಸ್ಕಾಂ ಅಧಿಕಾರಿಗಳು ಪ್ರತಿ ತಿಂಗಳು ಮೂರನೇ ಶನಿವಾರ ಭೇಟಿ ನೀಡಿ ವಿದ್ಯುತ್ ಅದಾಲತ್ ಮೂಲಕ‌ ಜನಸ್ಪಂದನೆ ನೀಡಿ ಇಂಧನ ಇಲಾಖೆಯನ್ನು ಗ್ರಾಹಕ ಹಾಗೂ ಜನಸ್ನೇಹಿಯನ್ನಾಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಹೆಸ್ಕಾಂ ಅಧಿಕಾರೇತರ ನಿರ್ದೇಶಕ ಸುನೀಲ ಸರೂರ ಮಾತನಾಡಿದರು.
ಪ್ರಕಾಶ ಪಾಟೀಲ,ರಮೇಶ ಬೆಂಡಿಗೇರಿ,ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ವಿನಾಯಕ ಪಾಲನಕರ್,ವೆಂಕಟರೆಡ್ಡಿ ,ವಿಚಕ್ಷಣಾ ದಳದ ಎಸ್.ಪಿ.ಶಂಕರ ಮಾರಿಹಾಳ ಮತ್ತಿತರರು ವೇದಿಕೆಯಲ್ಲಿದ್ದರು.

ಕಿರುಚಿತ್ರಗಳ ಪ್ರದರ್ಶನ

ಗ್ರಾಮ ವಿದ್ಯುದೀಕರಣ, ಮನೆಗಳ ವಿದ್ಯುದೀಕರಣ ಜಾಗತಿಕ ಅವಕಾಶಗಳ ಕುರಿತು ಕಿರುಚಿತ್ರ, ಉತ್ಪಾದನೆ ಸಾಮರ್ಥ್ಯ ಹೆಚ್ಚಿಸುವುದು, ಒಂದೇ ರಾಷ್ಟ್ರ ಒಂದೇ ವಿದ್ಯುತ್ ಜಾಲ ಸಾಕ್ಷ್ಯಚಿತ್ರ ಪ್ರದರ್ಶನ. ವಿತರಣಾ ಜಾಲ ಬಲಪಡಿಸುವುದು. ನವೀಕರಿಸಬಹುದಾದ ಇಂಧನ ಉತ್ಪಾದನೆ, ಗ್ರಾಹಕರ ಹಕ್ಕುಗಳ ಕುರಿತು ಕಿರುಚಿತ್ರ ಪ್ರದರ್ಶನ. ವಿದ್ಯುತ್ ಉಳಿತಾಯ ಹಾಗೂ ಕುಸುಮ ಯೋಜನೆಗಳ ಬಗ್ಗೆ ನುಕ್ಕಡ ನಾಟಕಗಳ ಪ್ರದರ್ಶನ ಹಾಗೂ ಫಲಾನುಭವಿಗಳ ಅನಿಸಿಕೆಗಳು ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Related Articles

Leave a Reply

Your email address will not be published. Required fields are marked *

Back to top button