ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಕಾಂಗ್ರೆಸ್ ನಾಯಕರ ನಿರ್ಧಾರ ಆಟಕ್ಕುಂಟು ಲೆಕ್ಕೆಕ್ಕಿಲ್ಲ!

ಹುಬ್ಬಳ್ಳಿ

ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ ಮಹಾಪೌರ ಶ್ರೀ ಈರೇಶ ಅಂಚಟಗೇರಿ ರಾಷ್ಟ್ರಪತಿ ಪೌರ ಸನ್ಮಾನ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದು ಪಾಲಿಕೆ ಕಾರ್ಯಕ್ರಮದ ಬದಲು ಬಿಜೆಪಿ ಕಾರ್ಯಕ್ರಮವಾಗುತ್ತಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಶ್ರೀ ದೊರೆರಾಜ್ ಮಣಿಕುಂಟ್ಲ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಪಕ್ಷದ ಜಿಲ್ಲಾಧ್ಯಕ್ಷರ ಆದೇಶ !

ಅಲ್ತಾಪ್ ಹಳ್ಳೂರ.

ಈಗ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಲ್ತಾಫಹುಸೇನ್ ಹಳ್ಳೂರ ಅವರು ಪತ್ರಿಕಾ ಹೇಳಿಕೆಯನ್ನು ನೀಡಿ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರೆಲ್ಲರೂ ರಾಷ್ಟ್ರಪತಿಯವರ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪಕ್ಷದ ವತಿಯಿಂದ ಆದೇಶ ನೀಡಿದ್ದಾರೆ.

ಆದರೆ ನಿನ್ನೆ ನಡೆದ ಕಾಂಗ್ರೆಸ್ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಕಾಂಗ್ರೆಸ್ ಅಧ್ಯಕ್ಷ ಅಲ್ತಾಪ್ ಹಳ್ಳೂರ ಕೂಡ ಇದ್ದರು. ಆದರೂ ಕೂಡ ಕಾರ್ಯಕ್ರಮದ ಕುರಿತು ದೊರೆರಾಜ್ ತೆಗೆದುಕೊಂಡ ನಿರ್ಧಾರಕ್ಕೆ ಚಕಾರ ಕೂಡ ಎತ್ತದೆ ಬೆಳಗಾಗುವಷ್ಟರಲ್ಲಿ ಕಾಂಗ್ರಸ್ಸಿನ ಪಾಲಿಕೆ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆದೇಶ ಮಾಡಿದ್ದು ಬಡಾ ಮಷ್ಕರಿ ಆದಂಗ ಆಯ್ತು.

Related Articles

Leave a Reply

Your email address will not be published. Required fields are marked *

Back to top button