ಸ್ಥಳೀಯ ಸುದ್ದಿ

ಕಾಂಗ್ರೆಸ್‌ ನಿಂದ ನಿರುದ್ಯೋಗಿಗಳಿಗೆ’ಯುವನಿಧಿ’ ಭರವಸೆ

ಬೆಳಗಾವಿ:ಕರ್ನಾಟಕದ ವಿಧಾನಸಭೆ ಚುನಾವಣೆ ಗೆಲ್ಲಲು ತಂತ್ರ ರೂಪಿಸಿರುವ ಕಾಂಗ್ರೆಸ್ ಪಕ್ಷ ಈಗಾಗಲೇ ಜನರಿಗೆ 3 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು.

ಯುವಕರನ್ನು ಗಮನದಲ್ಲಿಟ್ಟುಕೊಂಡು ‘ಯುವನಿಧಿ’ ಎಂಬ 4ನೇ ಗ್ಯಾರಂಟಿಯನ್ನು ಈಗ ಪ್ರಕಟಿಸಿದೆ. ಕರ್ನಾಟಕದಲ್ಲಿ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಲಿದೆ.

ಇಂದು ಬೆಳಗಾವಿಯಲ್ಲಿ ನಡೆದ ಕರ್ನಾಟಕ ಕಾಂಗ್ರೆಸ್‌ನ ಯುವ ಕ್ರಾಂತಿ ಸಮಾವೇಶದಲ್ಲಿ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಈ ಸಮಾವೇಶದಲ್ಲಿಯೇ ಕಾಂಗ್ರೆಸ್ 4ನೇ ಗ್ಯಾರಂಟಿ ‘ಯುವನಿಧಿ’ ಘೋಷಣೆ ಮಾಡಿದೆ. ಈ ಮೂಲಕ ಚುನಾವಣೆಯಲ್ಲಿ ಯುವಕರ ಮತಗಳನ್ನು ಸೆಳೆಯಲು ಮುಂದಾಗಿದೆ.ಕಾಂಗ್ರೆಸ್ ಪಕ್ಷ ‘ಯುವನಿಧಿ’ ಘೋಷಣೆಯಡಿ ನಿರುದ್ಯೋಗಿ ಪದವೀಧರಿಗೆ ತಿಂಗಳಿಗೆ 3 ಸಾವಿರ ರೂ. ಆರ್ಥಿಕ ಶಕ್ತಿಯನ್ನು, ಡಿಪ್ಲೊಮಾ ಪದವೀಧರಿಗೆ ಪ್ರತಿ ತಿಂಗಳು 1500 ರೂ. ನಿರುದ್ಯೋಗ ಭತ್ಯೆಯನ್ನು ಎರಡು ವರ್ಷಗಳ ತನಕ ನೀಡಲಿದೆ. ಕಾಂಗ್ರೆಸ್ ಪಕ್ಷ ಯುವಸಬಲೀಕರಣಕ್ಕೆ ಮಹತ್ವದ ಯೋಜನೆಯನ್ನು ಘೋಷಿಸುತ್ತಿದೆ ಎಂದು ಯುವನಿಧಿ ಕಾರ್ಯಕ್ರಮ ಘೋಷಣೆ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button