ಕಾಂಗ್ರೆಸ್ ಯುವ ಮುಖಂಡನ ಮೇಲೆ ಮಾರಾಣಾಂತಿಕ ಹಲ್ಲೆ!
ಹುಬ್ಬಳ್ಳಿ: ಮನೆಯ ಬಳಿ ನಿಲ್ಲ ಬೇಡ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಯುವ ಮುಖಂಡನ ಮೇಲೆ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ ಘಟನೆ ಇಲ್ಲಿನ ಸೋನಿಯಾ ಗಾಂಧಿನಗರದ ನಿಜಾಮುದ್ದಿನ ಪ್ಲಾಟ್ ನಲ್ಲಿ ನಡೆದಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಕಾಂಗ್ರೆಸ್ ಯುವ ಮುಖಂಡ ತೌಸಿಪ್ ಲಕ್ಕುಂಡಿ ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೆ ಸೊನಿಯಾಗಾಂದಿ ನಗರದಲ್ಲಿ ಮನೆಮಾಡಿದ್ದ ತೌಸಿಪ್ ಲಕ್ಕುಂಡಿಯ ಮನೆಯ ಬಳಿ ಪದೆ ಪದೆ ಐದಾರು ಜನರೊಂದಿಗೆ ಬಂದು ನಿಲ್ಲುತ್ತಿದ್ದ ಇಸ್ಮಾಯಿಲ್ ಹಾಗೂ ತೌಸಿಫ್ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಇದನ್ನೆ ಹಗೆ ಸಾಧಿಸಿದ ಇಸ್ಮಾಯಿಲ್ ಇಂದು ತೌಸೀಫ್ ನ ಮೇಲೆ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ್ದಾನೆ.
ಇನ್ನೂ ಕಳೆದ ಬಾರಿ ನಡೆದ ಪಾಲಿಕೆ ಚುನಾವಣೆಯಲ್ಲಿ ತಿಪ್ಪಣ್ಣ ಮಜ್ಜಗಿ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ತೌಸೀಪ್ ಜಸ್ಟ್ ಕ್ಯಾಂಡಿಡೆಟ್ ಆದಂಗಿತ್ತು.
ಹಲ್ಲೆಕೊರರನ್ನ ಈಗಾಗಲೆ ಬೆಂಡಿಗೇರಿ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ಮೂಲ ಕಾರಣ ಹೂಡುಕುತ್ತಿದ್ದಾರೆ.
ಹಲ್ಲೆ ವೇಳೆಯಲ್ಲಿ ದುಷ್ಕರ್ಮಿಗಳು ತೌಸಿಪ್ ಲಕ್ಕುಂಡಿಯ ಮೇಲೆ ಹರಿತವಾದ ಆಯುಧ ಗಳಿಂದ ದೇಹದ ಮೇಲೆ ಎಲ್ಲೆಂದರಲ್ಲಿ ಚಾಕುವಿನಿಂದ ಇರಿಯಲಾಗಿದ್ದು ಗಂಭೀರ ಸ್ವರೂಪದ ಗಾಯಗಳಾಗಿವೆ. ಅಲ್ಲದೆ ಎಡಗಾಲಿನ ಗಂಡು ನರವನ್ನೆ ಕುಯ್ದಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಭೆಂಡಿಗೇರಿ ಪೊಲೀಸರು ಭೇಟಿ ನೀಡಿದ್ದು ಗಾಯಾಳುವನ್ನು ಚಿಕಿತ್ಸೆಗೆ ಕಳುಹಿಸಿಕೊಡಲಾಗಿದ್ದು. ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.