ಸ್ಥಳೀಯ ಸುದ್ದಿ

ಕಾರ್ತಿಕೋತ್ಸವಕ್ಕೆ ಸಿದ್ದವಾಗಿದೆ ಕೆಲಗೇರಿ ಗ್ರಾಮ

ಧಾರವಾಡ

ಪ್ರತಿ ವರ್ಷದಂತೆ ಈ ವರ್ಷವೂ ಕೆಲಗೇರಿ ಗ್ರಾಮದಲ್ಲಿ ಕಾರ್ತಿಕೋತ್ಸವ ಆಚರಣೆ ಮಾಡಲಾಗುತ್ತಿದೆ.

ಶ್ರೀ ಬಸನಗೌಡ ಶಿವನಗೌಡ ಸಿದ್ದಾಪೂರ ಸಹೋದರರು ಹಾಗೂ ಕಲ್ಮೇಶ್ವರ ದೇವಸ್ಥಾನ ಮಂಡಳಿ ಸಹಯೋಗದಲ್ಲಿ
ನಾಳೆ ನವೆಂಬರ್ 19 ರಂದು ಈ ಕಾರ್ತಿಕೋತ್ಸವ ಕಾರ್ಯಕ್ರಮ ಕೆಲಗೇರಿಯ ಕಲ್ಮೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಜನಪ್ರೀಯ ಶಾಸಕ ಅರವಿಂದ ಬೆಲ್ಲದ, ಹುಬ್ಬಳ್ಳಿ ಧಾರವಾಡ ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ, ಸೇರಿದಂತೆ, ಇತರೆ ಜನಪ್ರತಿನಿಧಿಗಳು ಸ್ವಾಮೀಜಿಗಳು ಹಾಗೂ ಗಣ್ಯರು ಭಾಗಿಯಾಗಲಿದ್ದಾರೆ.

ಈ ಬಾರಿ ಭಜನಾ ಮನರಂಜನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Related Articles

Leave a Reply

Your email address will not be published. Required fields are marked *

Back to top button