ಸ್ಥಳೀಯ ಸುದ್ದಿ

ಕಿಟೆಲ್ ಕಾಲೇಜಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಮೇಯರ್

ಧಾರವಾಡ

ಧಾರವಾಡದ ಕಿಟಲ್ ಮಹಾವಿದ್ಯಾಲಯದ ಸಿಬ್ಬಂದಿಗಳ ಕೋರಿಕೆಯ ಮೇರೆಗೆ ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ಭೇಟಿ ನೀಡಿ ಅವರ ಸಮಸ್ಯೆಗಳಾದ ಒಳಚರಂಡಿಯಿಂದ ಶಾಲೆ ಹಾಗೂ ಉಪನ್ಯಾಸ ಕೊಠಡಿಯ ಒಳಗಡೆ ನೀರು ನುಗ್ಗುತ್ತಿರುವುದು, ಹಾಗೂ ಪಾಲಿಕೆಯ ಮುಖ್ಯ ನಾಲಾ ಅತಿಕ್ರಮಣದ ಬಗ್ಗೆ ಮಹಾಪೌರರ ಗಮನಕ್ಕೆ
ತಂದರು.

ಇವುಗಳ ಬಗ್ಗೆ ಗಮನ ಹರಿಸಿದ ಮಹಾಪೌರರು ಆದಷ್ಟು ಶೀಘ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ವಲಯ ಸಹಾಯಕ ಆಯುಕ್ತರಾದ ಶ್ರೀ ಆರ್.ಎಂ. ಕುಲಕರ್ಣಿ ರವರು, ಶ್ರೀ ಮನೋಜ್ ಗಿರೀಶ ರವರು, ಅಭಯಂತರರಾದ ಶ್ರೀ ರಾಜೇಶ ರವರು, ಶ್ರೀ ವಿಲ್ಸನ್ ಮೊಯಿಲಿ ರವರು, ಡಾ. ಕ್ರಿಸ್ಟೋಫರ್ ರವರು ಹಾಗೂ ಕಿಟಲ್ ಮಹಾವಿದ್ಯಾಲದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button