ಸ್ಥಳೀಯ ಸುದ್ದಿ

ಕಿತ್ತೂರಿನಲ್ಲಿ ಶಾಸಕ ವಿನಯ ಕುಲಕರ್ಣಿ ಅವರಿಂದ ಪರಿಸರ ದಿನ ಆಚರಣೆ

ಕಿತ್ತೂರು

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಇಂದು ಕಿತ್ತೂರಿನ ಡೊಂಬರಕೊಪ್ಪ ಪ್ರವಾಸಿ ಮಂದಿರದ ಆವರಣದಲ್ಲಿ ಸಸಿ ನೆಡುವುದರ ಮೂಲಕ ಪರಿಸರ ದಿನಾಚರಣೆ ಆಚರಣೆ ಮಾಡಿದ್ರು.

ಈ ವೇಳೆ ಮಾತನಾಡಿದ ಮಾನ್ಯ ಶಾಸಕರಾದ ವಿನಯ ಕುಲಕರ್ಣಿ ಅವರು, ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸಿಮೀತವಾಗದೇ, ನಿರಂತರ ಪರಿಸರದ ಬಗ್ಗೆ ಕಾಳಜೀ ವಹಿಸಿಕೊಂಡು, ಪರಿಸರದ ಪ್ರೀತಿ ಬೆಳೆಸಿಕೊಂಡು, ಹಸಿರೇ ನಮ್ಮ ಉಸಿರಾಗಿಸಿಕೊಳ್ಳಬೇಕೆಂದರು.

ಈ ಸಂಧರ್ಭದಲ್ಲಿ ಮಾನ್ಯ ಧಾರವಾಡ ಜಿಲ್ಲಾಧಿಕಾರಿಗಳವರಾದ  ಗುರುದತ್ತಹೆಗಡೆ, ಉಪವಿಭಾಗಾಧಿಕಾರಿಗಳಾದ  ಅಶೋಕ ತೇಲಿ, ಧಾರವಾಡ ಗ್ರಾಮೀಣ ತಹಶಿಲ್ದಾರ ಸಂತೋಷ ಬಿರಾದಾರ ಹಾಗೂ ಧಾರವಾಡ ಇಲಾಖೆ ಅಧಿಕಾರಿಗಳು ಸೇರಿತೆ ಬ್ಲಾಕ್ ಅಧ್ಯಕ್ಷರಾದ ಅರವಿಂದ ಏಗನಗೌಡರ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button