ಸ್ಥಳೀಯ ಸುದ್ದಿ

ಕುಡಿಯುವ ನೀರಿಗೆ ಟ್ಯಾಂಕರ್ ಗತಿ

ಧಾರವಾಡ

ಧಾರವಾಡ ನಗರದಲ್ಲಿ ಜಲಮಂಡಳಿ ಆವಾಂತರದಿಂದ ಕುಡಿಯುವ ನೀರಿಗೆ ಟ್ಯಾಂಕರ್ ಮೊರೆ ಹೋಗುವ ಪರಿಸ್ಥಿತಿ ಜನರಿಗೆ ಬಂದಿದೆ.

ಎಲ್ & ಟಿ ಕಂಪನಿ ನೀರಿನ ನಿರ್ವಹಣೆ ಮಾಡುತ್ತಿರುವ ಅವ್ಯವಸ್ಥೆಯಿಂದ ಈ ಸಮಸ್ಯೆ ಉಂಟಾಗಿದೆ.

ಮಾಳಮಡ್ಡಿಯ ಕೆಲವೊಂದು ಕಡೆ ಹಾಗೂ ಎಮ್ಮಿಕೇರಿಯ ಮಹಷಿ ರಸ್ತೆ ನಿವಾಸಿಗಳು ಕುಡಿಯುವ ನೀರಿಗಾಗಿ ನಿತ್ಯವೂ ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ.

ಕುಡಿಯುವ ನೀರಿನ ಅಭಾವ ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ.

24/7 ನೀರು ಬಂದ್ರೂ ಅದು ಯಾವಾಗ ಬರುತ್ತೋ ಆ ದೇವರೇ ಬಲ್ಲಾ…

ಇನ್ನು ಅಪಾರ್ಟ್ಮೆಂಟ್ ನಿವಾಸಿಗಳು ಟ್ಯಾಂಕರ್ ತರಿಸಿ ನೀರು ಹಾಕಿಸಿಕೊಳ್ಳುವ ಪರಿಸ್ಥಿತಿ ನಮಗೆ ಬಂತಲ್ಲಾ.

ಚುನಾವಣೆಯಲ್ಲಿ ವೋಟು ಹಾಕಿ ಆರಿಸಿ ಕಳಿಸಿದ ಇವರೆಲ್ಲಾ ನಮಗೆ ಈ ರೀತಿ ಸಮಸ್ಯೆ ತರೋದಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಮಹಿಷಿ ರಸ್ತೆಯ ನಿವಾಸಿಗಳು.

Related Articles

Leave a Reply

Your email address will not be published. Required fields are marked *

Back to top button