ಕೇಂದ್ರದ ಬಜೆಟ್ ಶ್ಲಾಘನೀಯ- ಬಿಜೆಪಿ ಯುವ ಮುಖಂಡ ಶ್ರೀಕಾಂತ್ ಕ್ಯಾತಪ್ಪನವರ ವಿಶ್ವಾಸ
ಧಾರವಾಡ
ಧಾರವಾಡ ಕಸೂತಿ ಕಲೆಯಿರುವ ಸೀರೆಯುಟ್ಟು ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸಿತಾರಾಮನ್
ಒಂದು ಅತ್ಯಂತ ಅಭಿವೃದ್ಧಿ ಪೂರಕ ಬಜೆಟ್ ಮಂಡಿಸಿದ್ದು ನಮಗೇಲ್ಲರಿಗೂ ಹೆಮ್ಮೆಯ ವಿಷಯ ಎಂದು
ಕಲಘಟಗಿ ವಿಧಾನ ಸಭಾ -75 ರ ಸೇವಾಕಾಂಕ್ಷಿ ಹಾಗೂ ಬಿಜೆಪಿ ಮುಖಂಡರಾದ ಶ್ರೀಕಾಂತ್ ಕ್ಯಾತಪ್ಪನವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೈಮಗ್ಗ ಉದ್ಯಮಕ್ಕೆ ಪ್ರೋತ್ಸಾಹಿಸಿ ಮತ್ತು ಸ್ವಯಂ ಉದ್ಯೋಗನಿರತ ಮಹಿಳೆಯರನ್ನು ಹುರುದುಂಬಿಸಿರುವ ಕೇಂದ್ರ ಸಚಿವರ ಈ ಕ್ರಮ ನಮಗೆ ಸಂತಸ ಮತ್ತು ಹೆಮ್ಮೆ ಮೂಡಿಸಿದೆ.
ಆದಾಯ ತೆರಿಗೆ ವಿನಾಯಿತಿಯನ್ನು 7 ಲಕ್ಷಕ್ಕೆ ಏರಿಸಿ ದೇಶದ ಮಧ್ಯಮ ವರ್ಗದ ಜನರ ಪರವಾಗಿ ಕೇಂದ್ರ ಸರಕಾರವು ಬಜೆಟ್ ಮಂಡನೆ ಮಾಡುವ ಮೂಲಕ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ.
ಬಡ ಮತ್ತು ಮಧ್ಯಮ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬಜೆಟ್ ಹಾಗೂ ಭವಿಷ್ಯಕ್ಕೆ ಅವಶ್ಯವಿರುವ ಕೌಶಲ್ಯಗಳನ್ನು ಕಲಿಯಲು ಯುವ ಪೀಳಿಗೆಗೆ ಸಹಕಾರಿಯಾಗಲಿದೆ.
ದೇಶದಲ್ಲಿ ಇರುವ ಬುಡಕಟ್ಟು ಜನಾಂಗದ ಮಕ್ಕಳ ವಿದ್ಯಾಭ್ಯಾಸವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರವು ಬಜೆಟ್ ಮಂಡನೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಏಕಲವ್ಯ ಮಾದರಿ ವಸತಿ ಶಾಲೆಗಳ ಮೂಲಕ
3.5 ಲಕ್ಷ ವಿದ್ಯಾರ್ಥಿಗಳಿಗೆ ಉಪಯೋಗ ವಾಗುವಂತೆ 38,800 ಶಿಕ್ಷಕರನ್ನು ನೇಮಿಸುವ ಕುರಿತು ವಿತ್ತ ಸಚಿವರು ಘೋಷಿಸಿದ್ದಾರೆ.
ದೇಶದ ಕಟ್ಟಕಡೆಯ ಜನರಿಗೂ ಕೂಡ ಶಿಕ್ಷಣ ಸೌಲಭ್ಯ ಒದಗಿಸಿ ಸಾಮಾನ್ಯ ಜನರ ಜೀವನವನ್ನು ಉತ್ತಮವಾಗಿಸಲು ಶ್ರಮಿಸುತ್ತಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರಕ್ಕೆ ಧನ್ಯವಾದಗಳು.
ಭದ್ರಾ ಮೇಲ್ದಂಡೆ ಯೋಜನೆಗೆ
5,300 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಈ ಅನುದಾನವೂ ಯೋಜನೆಯ ಅನುಷ್ಠಾನಕ್ಕೆ ಬಲ ನೀಡಲಿದ್ದು, ಮಧ್ಯ ಕರ್ನಾಟಕ ಭಾಗದ ಬರಪೀಡಿತ ಪ್ರದೇಶಗಳ ನೀರಿನ ಸಮಸ್ಯೆಯನ್ನು ಬಗೆಹರಿಸಲಿದೆ.
ರೈಲು ಸೇವೆಗಳನ್ನು ವಿಶ್ವ ದರ್ಜೆಗೆ ಏರಿಸಲು ಕಳೆದೆಲ್ಲ ಬಾರಿಗಿಂತ ಈ ಬಾರಿ ಹೆಚ್ಚಿಗೆ ಹಣವನ್ನು ಮೀಸಲಿಡಲಾಗಿದೆ.
ಕರ್ನಾಟಕಕ್ಕೆ ಹೆಚ್ಚು ಹೆಚ್ಚು ಅನುದಾನ ಕೊಡಿಸಲು ಮತ್ತು ಹೊಸ ಹೊಸ ಯೋಜನೆ ತರಲು ಶ್ರಮೀಸುತ್ತಿರು ನಮ್ಮ ಧಾರವಾಡದ ಸಂಸದರು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಜಿ ಅವರಿಗೆ ಅಬಿನಂದನೆಗಳು .
ರೈತಪರ ಮದ್ಯಮ ವರ್ಗದಪರ ಬಡವರಪರ ಮತು ಶಿಕ್ಷಣಕ್ಕೆ ನೀರಾವರಿ ಮತ್ತು ಅನೇಕ ಹೊಸ ಯೋಜನೆ ಗೊಸಿಶಿ ಬಜೆಟ್ ಮಂಡಿಸಿದ ಕೆಂದ್ರ ಸರ್ಕಾರದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ಕೇಂದ್ರ ಹಣಕಾಸುಸು ಸಚೀವೇಯರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಶ್ರೀಕಾಂತ ಕ್ಯಾತಪ್ಪನವರ
ಬಿಜೆಪಿ ಯುವ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.