ಸ್ಥಳೀಯ ಸುದ್ದಿ

ಕೇರಳ ರಾಜ್ಯದಲ್ಲಿ ಧಾರವಾಡದ ವಾಹನ ಅಪಘಾತ ಓರ್ವ ಸಾವು, 3 ಜನರಿಗೆ ಗಂಭೀರ ಗಾಯ

ಕೇರಳ

ಧಾರವಾಡ ಜಿಲ್ಲೆಯ ವಾಹನವೊಂದು ಕೇರಳದ ರಾಜ್ಯದ ಮಣಿಪುರಂ ಜಿಲ್ಲೆಯ ಎಡಪಲ್ ಎಂಬಲ್ಲಿ ಭೀಕರ ಅಪಘಾತವಾಗಿದ್ದು, ಘಟನೆಯಲ್ಲಿ ಪಾಂಡೆ ಕುಟುಂಬದ ಓರ್ವ ಸದಸ್ಯರಾದ ಸುಮಿತ್ ಪಾಂಡೆ ಅವರು ಸಾವನ್ನಪ್ಪಿದ್ದಾರೆ.

ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಪಾಂಡೆ ಕುಟುಂಬಸ್ಥರು ಕೇರಳ ರಾಜ್ಯಕ್ಕೆ ಹೋಗಿದ್ದರು. KA – 25, AB-6577 ವಾಹನ ಅಪಘಾತವಾಗಿದ್ದು, ಸೈದಾಪೂರದ ನಿವಾಸಿಗಳು ಅಯ್ಯಪ್ಪಾ ಮಾಲಾಧಾರಿಗಳು ಆಗಿದ್ದರು. ಇದರಲ್ಲಿ 10 ವರ್ಷದ ಬಾಲಕ ಸುಮಿತ್ ಪಾಂಡೆ ಘಟನೆಯಲ್ಲಿ ಸಾವೀಗಿಡಾಗಿದ್ದಾರೆ.

ಘಟನೆ ನಡೆದ ತಕ್ಷಣ ಅಯ್ಯಪ್ಪಾ ಸ್ವಾಮೀ ವೃಂದದವರು ಹಾಗೂ ಕುಟುಂಬಸ್ಥರು ಮೇಯರ್ ಗಮನಕ್ಕೆ ತಂದರು.

ಅಪಘಾತದ ಸುದ್ದಿ ತಿಳಿದ ತಕ್ಷಣ ಹುಬ್ಬಳ್ಳಿ ಧಾರವಾಡ ಅವಳಿನಗರದ ಮೇಯರ್ ಈರೇಶ ಅಂಚಟಗೇರಿ ಅವರು, ತಕ್ಷಣವೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಗಮನಕ್ಕೆ ತಂದು, ವಿದೇಶಾಂಗ ಸಚಿವ ಮುರಳಿಧರ ಅವರ ಜೋತೆಗೆ ಪ್ರಹ್ಲಾದ ಜೋಶಿ ಅವರು ಮಾತನಾಡಿ, ಗಾಯಾಳುಗಳಿಗೆ ಮಣಿಪುರಂ ಜಿಲ್ಲೆಯ ಎಡಪಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆಸ್ಪತ್ರೆ ಸಿಬ್ಬಂದಿ ಗಾಯಾಳುಗಳಿಗೆ ಚಿಕೆತ್ಸೆ ಮುಂದುವರೆಸಿದ್ದಾರೆ.

ಮೇಯರ್ ಅಂಚಟಗೇರಿ ಅವರ ಸಮಯ ಪ್ರಜ್ಞೆಯಿಂದ 3 ಮಂದಿ ಜೀವ ಉಳಿದಂತೆ ಆಗಿದ್ದು, ಆಸ್ಪತ್ರೆಗೆ ದಾಖಲು ಮಾಡಿ‌ಸಿ ಚಿಕೆತ್ಸೆ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಮೃತಪಟ್ಟ ಅಯ್ಯಪ್ಪ ಮಾಲಾಧಾರಿಯಾಗಿದ್ದ ಬಾಲಕನ ಮರಣೋತ್ತರ ಪರೀಕ್ಷೆಯನ್ನ ಮಾಡಲಾಗಿದ್ದು, ಮೃತದೇಹ ಧಾರವಾಡಕ್ಕೆ ಬರಲು‌ ಸಿದ್ಧತೆ ಮಾಡಿಕೊಳ್ಳಲಾಗಿದೆ.

Related Articles

Leave a Reply

Your email address will not be published. Required fields are marked *

Back to top button