ಬೆಂಗಳೂರುರಾಜಕೀಯರಾಜ್ಯಸ್ಥಳೀಯ ಸುದ್ದಿ

ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ “ಪುನಿತ್ ಕೆರಳ್ಳಿ” ಸೇರಿದಂತೆ ಐವರ ಬಂಧನ!

ಪುನಿತ್ ಕೆರೆಹಳ್ಳಿ ಪೊಲಿಸರ ಬಲೆಗೆ!

ಗೊ ರಕ್ಷಣಾ ಹೆಸರಲ್ಲಿ ಹಲವು ವಾಹನಗಳನ್ನು ತಡೆದು ನೈತಿಕ ಪೊಲಿಸಗಿರಿ ಮಾಡುತ್ತಿದ್ದ ಪುನಿತ್ ಕೆರೆಳ್ಳಿ ಎಂಬಾತನ ಮೇಲೆ ಕೊಲೆ ಆರೋಪದ ದೂರಿನ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಸಾತನೂರು ಠಾಣೆ ಪೊಲಿಸರು ಐವರನ್ನ ವಶಕ್ಕೆ ಪಡೆದಿದ್ದಾರೆ.

ಪುನಿತ್ ಕೆರಳ್ಳಿ,ಗೋಪಿ, ಪವನಕುಮಾರ,ಬಿರಲಿಂಗ ಅಂಬಿಗೇರ,ಸುರೇಶ್ ಕುಮಾರ್,

ಮಂಡ್ಯ ಜಿಲ್ಲೆಯ ಸಾತನೂರು ಪೊಲಿಸ್ ಠಾಣಾವ್ಯಾಪ್ತಿಯಲ್ಲಿ ಮಾರ್ಚ 31ರ ರಾತ್ರಿ 11ರ ವೇಳೆಗೆ ಪುನಿತ್ ಕೇರಳ್ಳಿ ಮತ್ತು ಆತನ ಸಹಚರರು ಕ್ಯಾಂಟರ್ ವಾಹನ ತಡೆದು ಅದ್ರಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದಿರಿ ಎಂದು ಚಾಲಕನೊಂದಿಗೆ ವಾಗ್ವಾದ ನಡೆಸಿದ್ದಾರೆ. ಆದಿನ ಪ್ರತ್ಯೇಕ ಮೂರು ಪ್ರಕರಣಗಳನ್ನು ದಾಖಲಿಸಿ ಕೊಂಡಿದ್ದ ಸಾತನೂರು ಪೊಲಿಸರು. ಮರುದಿನ ಕ್ಯಾಂಟರ್ ವಾಹನದ ಚಾಲಕ ಇದ್ರೀಷ್ ಪಾಷಾ ಎಂಬುವವರು ಪೊದೆಯೊಂದರಲ್ಲಿ ಶವವಾಗಿ ಸಿಕ್ಕದ್ದರಿಂದ. ಮೃತನ ಕುಟುಂಬಸ್ಥರು ಪುನಿತ್ ಕೆರಳ್ಳಿ ಹಾಗೂ ಇತರ ಐವರ ವಿರುದ್ಧ ಪೊಲಿಸರಿಗೆ ದೂರು ನೀಡಿದ್ದರು.

ಇದ್ರೀಷ ಪಾಷ ಮೃತ ವ್ಯಕ್ತಿ!

ಪ್ರಕರಣ ದಾಖಲಿಸಿಕೊಂಡಿದ್ದ ಸಾತನೂರು ಪೊಲಿಸರು ತಲೆ ಮರಿಸಿಕೊಂಡಿದ್ದ ಆರೋಪಿ ಗಳಿಗಾಗಿ ಪೊಲಿಸರು ಶೋಧ ಕಾರ್ಯ ನಡೆಸಿದ್ದರು. ಪ್ರಕರಣ ದಾಖಲಾದ ಐದು ದಿನಗಳ ನಂತರ ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂದಿಸುವಲ್ಲಿ ಸಾತನೂರು ಪೊಲಿಸರು ಯಶಸ್ವಿಯಾಗಿದ್ದಾರೆ.

ಆರೋಪಿತರು ಗುಜರಾತ್ ಹಾಗೂ ರಾಜಸ್ಥಾನದ ಗಡಿ ಜಿಲ್ಲೆಯ ಬಾನಸ್ವಾರನಲ್ಲಿದ್ದ ಪುನಿತ್ ಕೆರಳ್ಳಿ,ಗೋಪಿ, ಪವನಕುಮಾರ,ಬಿರಲಿಂಗ ಅಂಬಿಗೇರ,ಸುರೇಶ್ ಕುಮಾರ್, ಪೊಲಿಸರ ಬಲೆಗೆ ಬಿದ್ದಿದ್ದಾರೆ.

ಪ್ರಸ್ತುತ ಬಾನಸ್ವಾರ ನ್ಯಾಯಲಯಕ್ಕೆ ಹಾಜರುಪಡಿಸಿ ಮತ್ತೆ ಟ್ರಾನ್ಸೇಂಟ್ ವಾರೆಂಟ್ ಮೂಲಕ ವಶಕ್ಕೆ ತೆಗೆದುಕೊಂಡು ರಾಮನಗರಕ್ಕೆ ಕರೆತಂದು ಮುಂದಿನ ವಿಚಾರಣೆ ನಡೆಸಲಾತ್ತದೆ. ಈಗಾಗಲೇ ಹನ್ನೋಂದಕ್ಕು ಹೆಚ್ಚು ಪ್ರಕರಣಗಳು ಪುನಿತ್ ಕೆರಳ್ಳಿ ಮೇಲೆ ಇರುವುದಾಗಿ ಮಾಹಿತಿ ನೀಡಿದ ಪೊಲಿಸ್ ವರಿಷ್ಠಾಧಿಕಾರಿ ಕಾರ್ತಿಕ ರೆಡ್ಡಿ ಮಾತನಾಡಿ ಕಾರ್ಯಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗಳಿಗೆ ಒಂದು ಲಕ್ಷ ರೂ.ಗಳ ಬಹುಮಾನಗಳನ್ನು ನಿಡಲಾಗುವುದು ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button