ಸ್ಥಳೀಯ ಸುದ್ದಿ

ಕೋಳಿ ಸಾಗಿಸುತ್ತಿದ್ದ ಜೀಪ‌ ಪಲ್ಟಿ

ಧಾರವಾಡ

ಧಾರವಾಡದಲ್ಲಿ ಕೋಳಿ ಸಾಗಿಸುತ್ತಿದ್ದ ಜೀಪ್ ಒಂದು ಪಲ್ಟಿಯಾದ ಘಟನೆ ಉಪನಗರ ಪೊಲೀಸ್ ಠಾಣೆ ಮುಂದೆ ನಡೆದಿದೆ.

ನಸುಕಿನ ಜಾವ ನಿದ್ದೆಯ ಮಬ್ಬಿನಲ್ಲಿ ಇದ್ದ ಚಾಲಕ ಡಿವೈಡರಗೆ ಡಿಕ್ಕಿ ಹೊಡೆದ ಪರಿಣಾಮ ಈ ಜೀಪ್ ಪಲ್ಟಿಯಾಗಿದೆ.

ಗದಗ ಜಿಲ್ಲೆಗೆ ಈ ಪೌಲ್ಟ್ರಿ ಜೀಪ್ ಹೊರಟಿದ್ದು, ಅಪಘಾತಕ್ಕೆ ಕೋಳಿಮರಿಗಳು ಸಾವನ್ನಪ್ಪಿವೆ.
ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೆಳ್ಳಿಗ್ಗೆ ಕ್ರೇನ ಮೂಲಕ ವಾಹನವನ್ನು ತೆರವು ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.

ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Related Articles

Leave a Reply

Your email address will not be published. Required fields are marked *

Back to top button