ಧಾರವಾಡಸ್ಥಳೀಯ ಸುದ್ದಿ

ಕ್ಲಾಸ್-_1 ಕಾಂಟ್ರಾಕ್ಟ್ ರ ಗಳಅಸಲಿಯತ್ತು.ಅಧಿಕಾರಿಗಳ ಮಸಲತ್ತು.

ಧಾರವಾಡ

ಪವರ್ ಸಿಟಿ ನ್ಯೂಸ್ ಕನ್ನಡ

ಸಿಎಂ ತವರು ಜಿಲ್ಲೆಯ PWD ಕಚೇರಿಯಲ್ಲಿ ನಡೆದಿದೆ ಭಾರಿ ಗೋಲ್ಮಾಲ್

ಲೋಕೋಪಯೋಗಿ ಕಚೇರಿಯಲ್ಲಿ ನಡೆದಿರುವ ದೊಡ್ಡ “ಗೋಲ್ಮಾಲ್” ಬಗ್ಗೆ “ಪವರ್ ಸಿಟಿ” ನ್ಯೂಸ್ ಬಿಗ್ ಎಕ್ಸಪೋಸ್ …

ಹೌದು ಧಾರವಾಡ ಜಿಲ್ಲೆಯಲ್ಲಿ ಪ್ರಭಾವಿಗಳು( ಹಣ ಇದ್ದವರು) ಯಾರಿಗೆ ಬೇಕಾದ್ರೂ ಗುತ್ತಿಗೆದಾರರ ಲೈಸನ್ಸ್ ಪಡೆಯಲುಬಹುದು ಹಾಗೂ ಕೊಡಿಸಲುಬಹುದು ಎನ್ನುವುದಕ್ಕೆ ಧಾರವಾಡ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಚೀಫ್ ಎಂಜಿನೀಯರ್ ಆಫೀಸ್ ಸಾಕ್ಷಿಯಾಗಿದೆ.

ಈ ಬಗ್ಗೆ ಸ್ವತಃ ಆಡಳಿತ ಪಕ್ಷದ ಶಾಸಕರೊಬ್ಬರು ಜಿಲ್ಲೆಯಲ್ಲಿ ಗುತ್ತಿಗೆದಾರರ ಲೈಸನ್ಸ ಪಡೆಯಲು ಅರ್ಹತೆ ಇಲ್ಲದವರಿಗೆ ಮಾರಾಟವಾಗಿವೆ. ಇದನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲಾ. ಹೀಗಾಗಿ ಸರ್ಕಾರದ ಮಟ್ಟದಲ್ಲಿ ತನಿಖೆ ಆಗಬೇಕೆಂದು‌ ಶಾಸಕರು ಪತ್ರ ಬರೆದಿದ್ದಾರೆ.

ಈ ಬಗ್ಗೆ ಚೀಫ್ ಎಂಜಿನೀಯರ್ ಮಾತ್ರ ನಮಗೇನೊ ಗೊತ್ತಿಲ್ಲಾ. ನಾವು ಹಿರಿಯ ಅಧಿಕಾರಿಗಳ ಪರವಾನಿಗೆ ಇಲ್ಲದೇ ಮಾತನಾಡುವ ಹಾಗಿಲ್ಲ ಎನ್ನುತ್ತಲೆ ತಮ್ಮ ಕೆಲ್ಸಾ ಮಾಡ್ತಾರೆ.

ಜೋತೆಗೆ ರಜಿಸ್ಟರ್ ಚವ್ಹಾಣ ಮೇಡಂ ಕೂಡ ನೋ ಕಮೆಂಟ್ಸ್ ಪ್ಲೀಸ್ ಎಂದು ಸುಮ್ಮನಾಗಿದ್ದಾರೆ

ಅಧಿಕೃತ ಗುತ್ತಿಗೆದಾರರಾಗಲು ಇರುವ ಮಾನದಂಡಗಳೇನು ಎನ್ನುವುದನ್ನು ಹೇಳ್ತಿವಿ ನೋಡಿ..

class 4– ಇದನ್ನು ಪಡೆಯಲು ಮೊದಲು 2 ಪೋಟೊ ಕೊಟ್ಟು, 2 ರಿಂದ 3 ವರ್ಷ ಕ್ಲಾಸ್ 1 ಗುತ್ತಿಗೆದಾರನ ಕಡೆಗೆ 50 ಸಾವಿರ ಮೌಲ್ಯದ ಕೆಲಸವನ್ನು ಮಾಡಿರಬೇಕು ಹಾಗೂ ಪ್ರಮಾಣ ಪತ್ರ ತಗೊಳ್ತಾರೆ.

class3– 5 ಲಕ್ಷದ ವರೆಗೆ ಕೆಲಸ ಮಾಡಿರಬೇಕು.

class– 2 – 50 ರಿಂದ 1 ಕೋಟಿ ಕೆಲಸ ಮಾಡಿರಬೇಕು ಗುತ್ತಿಗೆದಾರರು

class 1 ಗುತ್ತಿಗೆದಾರರು 1 ಕೋಟಿಗಿಂತ ಅಧಿಕ ಕೆಲಸ ಮಾಡಿರಬೇಕು (ವರ್ಕ್ ಡನ್)

ಹೀಗೆ ಗುತ್ತಿಗೆದಾರರ ಕೆಲಸ ಮೇಲೆ ವರ್ಗೀಕರಣ ಇರುತ್ತೆ.

ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ class 4 ಕಾಂಟ್ರ್ಯಾಕ್ಟರ್ ಲೈಸನ್ಸ್ ಹೊಂದಿರುವ 3 ಸಾವಿರಕ್ಕೂ ಹೆಚ್ಚು ಜನ ಗುತ್ತಿಗೆದಾರರರು ಇದ್ದಾರಂತೆ.

ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಂಡ ಬಗ್ಗೆ ಮಾಹಿತಿ ನಿಡುವಂತೆ ಬರೆದಿರುವ ಶಾಸಕರ ಪತ್ರಕ್ಕೆ ನಾಲ್ಕು ತಿಂಗಳು ಗತಿಸಿವೆ ಆದರೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಹಾಗಾದ್ರೆ ಕಪ್ಪು ಪಟ್ಟಿ ಸೆರಿದ ಕಾರ್ಡ್ ಗಳೆಷ್ಟು. ಆ ಬಗ್ಗೆ ಮತ್ತಷ್ಟು ಸಮಗ್ರ ಮಾಹಿತಿಗೆ ನೊಡ್ತಾಯಿರಿ ಪವರ್ ಸಿಟಿ ನ್ಯೂಸ್ ಕನ್ನಡ

Related Articles

Leave a Reply

Your email address will not be published. Required fields are marked *

Back to top button