ಕ್ಷೇತ್ರದ ಜನರ ಅನುಕೂಲಕ್ಕೆ 2 ಹೊಸ ಕಚೇರಿ ಉದ್ಘಾಟನೆ

ಧಾರವಾಡ
ಧಾರವಾಡ ಜಿಲ್ಲೆಯ ಜನಪ್ರೀಯ ಸನ್ಮಾನ್ಯ ಗ್ರಾಮೀಣ ಶಾಸಕರಾದ ಶ್ರೀ ವಿನಯ ಕುಲಕರ್ಣಿ ಅವರ ಕಚೇರಿಯನ್ನು ಧಾರವಾಡದಲ್ಲಿ ಉದ್ಘಾಟಿಸಲಾಯಿತು.

ಇಂದು ಗುರುವಾರ ದಿನಾಂಕ 15/6/2023 ರಂದು 10-30 ಗಂಟೆಗೆ,ಸಾರ್ವಜನಿಕರ ಅನುಕೂಲಕ್ಕಾಗಿ, ಧಾರವಾಡ – 71 ಕ್ಷೇತ್ರದ ಮಾನ್ಯ ಶಾಸಕರ ಜನ ಸಂಪರ್ಕ ಕಾರ್ಯಾಲಯವನ್ನು, ತಾಲೂಕ ಪಂಚಾಯತ ಆವರಣದಲ್ಲಿ ಮ.ನಿ.ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶ್ರೀ ಮುರುಘಾಮಠ ಇವರ ಅಮೃತ ಹಸ್ತದಿಂದ ಉಧ್ಘಾಟಿಸಿದರು.




ಈ ಸಂದರ್ಭದಲ್ಲಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಅವರು ಮಾತನಾಡಿ, ಧಾರವಾಡದ ಮಹಾನಗರ ಪಾಲಕೆಯಲ್ಲಿ ಹಾಗೂ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ , 2 ಕಾರ್ಯಲಯವನ್ನು ಸಾರ್ವಜನಿಕರ ಕುಂದುಕೊರತೆ ಆಲಿಸುವ ಹಿನ್ನೆಲೆಯಲ್ಲಿ ತೆರೆಯಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಪಾರದರ್ಶಕ ಆಡಳಿತಕ್ಕಾಗಿ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.



ಈ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಚನಬಸಪ್ಪ ಮಟ್ಟಿ, ಪಾಲಿಕೆ ಸದಸ್ಯರುಗಳಾದ. ರಾಜಶೇಖರ ಕಮತಿ,ದೀಪಾ ನೀರಲಕಟ್ಟಿ,ಸೂರವ್ವ ಪಾಟೀಲ,ಮುಖಂಡರುಗಳಾದ ಅಶೋಕ ಸೂರ್ಯವಂಶಿ, ಸಂಜೀವ ಲಕಮನಹಳ್ಳಿ,ಕಿಶೋರ ಬಡಿಗೇರ, ಮಡಿವಾಳಪ್ಪ ದಿಂಡಲಕೊಪ್ಪ, ಮಲ್ಲಿಕಾರ್ಜುನ ಆಯೆಟ್ಟಿ, ಮೈಲಾರಗೌಡ ಪಾಟೀಲ, ರೆಣುಕಾ ಕಳ್ಳಿಮನಿ, ಗೌರಮ್ಮ ಬಳೋಗಿ ಸೇರದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

