ಸ್ಥಳೀಯ ಸುದ್ದಿ
ಖಾಲಿ ಕೊಡ ಇಟ್ಟು ರಾತ್ರಿ ಮುರಘಾಮಠದ ಮುಂದೆ ಪ್ರತಿಭಟನೆ
ಧಾರವಾಡ
ಕುಡಿಯುವ ನೀರಿಗಾಗಿ ಮಾಜಿ ಸಚಿವರ ಪತ್ನಿ ಶೀವಲೀಲಾ ಕುಲಕರ್ಣಿ ಅವರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ಮಾಡಿದ ಘಟನೆ ನಡೆಯಿತು.
ಧಾರವಾಡ ಮುರಘಾಮಠದ ಮುಂದೆ ಕಳೆದ 1 ವಾರದಿಂದ ನೀರು ಬಾರದೇ ಇದ್ದ ಹಿನ್ನೆಲೆಯಲ್ಲಿ ಜನರ ಪರವಾಗಿ ಹೋರಾಟಕ್ಕೆ ಇಳಿದ್ರು.
ಈ ಸಂದರ್ಭದಲ್ಲಿ ಪೊಲೀಸರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ರೇ ಕೇಸ ಮಾಡಲಾಗುತ್ತೆ ಎಂದು ಎಚ್ಚರಿಸಿದ್ರು.
ಕೇಸ್ ಮಾಡರಿ ನೋಡೊಣ ನಾವ ರೆಡಿ ಇದೀವಿ ಎಂದು ಶಿವಲೀಲಾ ಕುಲಕರ್ಣಿ ಅವರು ಹೇಳಿದ ನಂತರ ಪೊಲೀಸರಿಗೆ ಹಾಗೂ ಪ್ರತಿಭಟನಾಕಾರರಿಗೆ ವಾಗ್ವಾದ ನಡೆಯಿತು.
ಇದೇ ವಾಗ್ವಾದ ಮುಂದುವರೆದು ನಮಗೆ ಚಾವಿ ಕೊಟ್ಟರು ದಿನಾಲು ನೀರು ಬಿಡ್ತೇವಿ ನಮ್ಮದೇನಿಲ್ಲಾ ಇದ್ದರಲ್ಲಿ ಪ್ರತಿಭಟನೆ ಮುಗಿಸಿ ಎಂದಾಗ ನಾವು ಚಾವಿ ಕೊಟ್ರು ನೀರು ಬಿಡ್ತೇವಿ ಎಂದು ನೀರಿಗಾಗಿ ಪ್ರತಿಭಟನೆ ಮಾಡಿದವರು ಆಕ್ರೋಶ ವ್ಯಕ್ತಪಡಿಸಿದ್ರು.