ಸ್ಥಳೀಯ ಸುದ್ದಿ
ಖಾಸಗಿ ಕಂಪನಿ HR ನನ್ನು ಸುಟ್ಟು ಕೊಲೆ ಮಾಡಿದ ಹೆಂಡತಿ ಮನೆಯವರು
ಬೆಂಗಳೂರು
ಖಾಸಗಿ ಕಂಪನಿಯಲ್ಲಿ HR ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯನ್ನು ಆತನ ಪತ್ನಿ ಹಾಗೂ ಪತ್ನಿಯ ಸಹೋದರರು ಸುಟ್ಟು ಕೊಲೆ ಮಾಡಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಹುಮನಾಬಾದ ನಿವಾಸಿತಾಗಿದ್ದ ಮೃತ ಶ್ರೀನಿವಾಸ ನಿಂಗೊಂಡ ಧಾರವಾಡ ಜಿಲ್ಲೆಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು.
ತದನಂತರ ಬಳ್ಳಾರಿ ಹಾಗೂ ತುಮಕೂರು ಜಿಲ್ಲೆಗೆ ಕೆಲಸದ ನಿಮಿತ್ತ ಹೋಗಿದ್ದರು.
ಮೊದಲ ಹೆಂಡತಿ ಮದುವೆಯಾಗಿಯೂ ಕೂಡ ಮನೆಯಲ್ಲಿ ತಿಳಿಸದೇ ಇನ್ನೊಂದು ಮದುವೆಯಾಗಿದ್ದು ಕೊಂಡಿದ್ದು, ಇದೇ ಮದುವೆ ಕೊಲೆಗೆ ಕಾರಣವಾಗಿದೆ.
ಕೊಲೆ ಮಾಡಿದ ಎರಡನೆ ಪತ್ನಿ ಹಾಗೂ ಆಕೆಯ ಸಹೋದರರಾದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.