ಸ್ಥಳೀಯ ಸುದ್ದಿ

ಖ್ಯಾತ ಚಿತ್ರನಟ ನಿಹಾಲ್ ರಜಪೂತ್ ಜಾತ್ರಾ ಮಹೋತ್ಸವದಲ್ಲಿ ‌ಭಾಗಿ

ಬೈಲಹೊಂಗಲ

ಸ್ಯಾಂಡಲವುಡನ್ ಖ್ಯಾತ ಚಿತ್ರನಟ ನಿಹಾಲ್ ರಜಪೂತ್ ಅವರು ಇಂದು ತಮ್ಮ ‌ದಿನನಿತ್ಯದ ಒತ್ತಡದ ಬದುಕಿನ ಮಧ್ಯೆಯೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯನಾಗರದ ಶ್ರೀ‌ ಸುಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀಗಳ ದರ್ಶನ ಪಡೆದ್ರು.

ಇದೇ ಸಂದರ್ಭದಲ್ಲಿ ನಯಾನಗರದ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮೀಜಿ ನಟ ನಿಹಾಲ್ ಅವರನ್ನು ಸನ್ಮಾನಿಸಿ ಗೌರವಿಸಿದ್ರು.

ವೇದಿಕೆ ಮೇಲೆ‌ ಸನ್ಮಾನ ಸ್ವೀಕರಿಸಿ ಮಾತನಾಡಿದ ಖ್ಯಾತ ಚಿತ್ರ ನಟ ನಿಹಾಲ್ ನನಗೆ ವೇದಿಕೆ ಮೇಲೆ‌ ಇವತ್ತು ನಿಲ್ಲೋಕೆ ಅವಕಾಶ ಮಾಡಿಕೊಟ್ಟಿದ್ದು ಶ್ರೀ ವಿಜಯ ಸಂಕೇಶ್ವರ ಸರ್. ಅವರಿಂದ ಇಂದು‌ ಸಾವಿರಾರು ಮಂದಿ ಬದುಕು ಕಟ್ಟಿಕೊಂಡಿದ್ದಾರೆ.
ಹೀಗಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುವೆ ಎಂದರು.

ಇನ್ನು ಸಿನಿಮಾ ರಂಗದಲ್ಲಿ ಬಹಳಷ್ಟು ಅವಕಾಶಗಳಿದ್ದು, ಯುವ ಪೀಳಿಗೆ ಇದರ ಸದುಪಯೋಗ ‌ಪಡಿಸಿಕೊಳ್ಳಲಿ ಎಂದರು.

ವಿಶೇಷವಾಗಿ ಜಾತ್ರೆಗೆಂದು ಜರ್ಮನ್ ದೇಶದಿಂದ ಬಂದ ಭಕ್ತನ ಕುರಿತಾಗಿ ನಟ ನಿಹಾಲ್ ಮೆಚ್ಚುಗೆ ವ್ಯಕ್ತಪಡಿಸಿ, ಗ್ರಾಮದ ಯುವಕರು ಅವರಂತೆ ಮಾದರಿ ವ್ಯಕ್ತಿಯಾಗಿ ಎಂದು ಮಕ್ಕಳಿಗೆ ಭವಿಷ್ಯದ ದಾರಿಯನ್ನು ತಿಳಿ ಹೇಳಿದ್ರು.

ನಿಹಾಲ್ ಅವರ ಬಗ್ಗೆ ಅವರ ಅಭಿಮಾನಿಗಳು ಪೋಟೊ ತೆಗೆದುಕೊಂಡು ಸಂಭ್ರಮಿಸಿದ್ರು.

Related Articles

Leave a Reply

Your email address will not be published. Required fields are marked *

Back to top button