ಗಂಡನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ – ನೊಂದ ಪತ್ನಿಯಿಂದ ಪೊಲೀಸ ಠಾಣೆಯಲ್ಲಿ FIR ದಾಖಲು

ಧಾರವಾಡ
ಮದುವೆಯಾಗಿ ಕೆವಲ 3 ವರೆ ವರ್ಷದಲ್ಲಿ 2. ಮಕ್ಕಳಾದ ಬಳಿಕ ಹೆಂಡತಿಯನ್ನು ತವರು ಮನೆಯಲ್ಲಿ ಬಿಟ್ಟು ಪರ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಪತಿ ವಿರುದ್ದ ಹೆಂಡತಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ಗಂಡನ ಜೋತೆಗೆ ಜೀವನ ಮಾಡುವೆ ಎಂದು ಹೆಂಡತಿ ತವರು ಮನೆಯಿಂದ ಗಂಡನ ಮನೆಗೆ ಹೋದಾಗ ಫೆಬ್ರವರಿ 22, 2023 ರಂದು ಮಹಿಳೆಗೆ ಹಲ್ಲೆ ಮಾಡಿ, 5. ಲಕ್ಷ ವರದಕ್ಷಿಣೆ ಹಣ ತರುವಂತೆ ಹೊರ ಹಾಕಿದ್ದಾರೆ. ಇದರಿಂದ ನೊಂದಿರುವ ಪತ್ನಿ ನಿನ್ನೆ ಜುಲೈ 3 ರಂದು ಧಾರವಾಡ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಗಂಡನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಂದು ಮನವಿ ಮಾಡಿದ್ದಾರೆ.

ಪತ್ನಿಗೆ ಮೋಸ ಮಾಡಿದ ಪತಿರಾಯ ಧಾರವಾಡ ತಾಲೂಕಿನ ಕಲ್ಲಾಪೂರ ಗ್ರಾಮದ ರಾಘವೇಂದ್ರ ಅಂತಪ್ಪನವರ ಹಾಗೂ ಆತನ ತಂದೆ ತಾಯಿ, ಸೋದರರ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ Dp Act IPC 1961,(U /S,3-4) 1860 (U/S-34 ,498A, 504, 323,) ಪ್ರಕರಣ ದಾಖಲಾಗಿದೆ.

ಗಂಡ ರಾಘವೇಂದ್ರ , ಅತ್ತೆ ಚಂದ್ರವ್ವ, ಮಾವ ಹನುಮಂತಪ್ಪ, ಮೈದುನ ಸಿದ್ದಪ್ಪನ ಮೇಲೆ ವರದಕ್ಷಿಣೆ ಕಿರಿಕುಳ ಹಾಗೂ ಮಾನಸಿಕ ಹಾಗೂ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.