ಸ್ಥಳೀಯ ಸುದ್ದಿ
ಗರಗ ಕಲ್ಮಠದ ಶ್ರೀಗಳು ಲಿಂಗೈಕ್ಯ- ಮೇಯರ್ ಅಂಚಟಗೇರಿ ಸಂತಾಪ

ಧಾರವಾಡ
ಧಾರವಾಡ ತಾಲೂಕಿನ ಐತಿಹಾಸಿಕ ಗರಗ ಮಡಿವಾಳೇಶ್ವರ ಕಲ್ಮಠದ ಶ್ರೀ ಮ.ನಿ.ಪ್ರ.ಚನ್ನಬಸವ ಸ್ವಾಮೀಜಿಗಳ ನಿಧನದ ಸುದ್ದಿ ಮನಸ್ಸಿಗೆ ತೀವ್ರ ಆಘಾತವನ್ನು ಉಂಟುಮಾಡಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಲ್ಮಠದ ಜವಾಬ್ದಾರಿ ಹೊತ್ತುಕೊಂಡಿದ್ದ ಚನ್ನಬಸವ ಸ್ವಾಮೀಜಿಗಳು ಮಠದ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದ್ದರು.
ಅಲ್ಲದೇ ಅನ್ನದಾನ ಹಾಗೂ ವಿದ್ಯಾದಾನಕ್ಕೆ ಒತ್ತುಕೊಟ್ಟು ಎಲೆಮರೆಯ ಕಾಯಿಯಂತೆ ಸಮಾಜ ಸೇವೆ ಮಾಡಿದ್ದರು.
ಶ್ರೀಗಳ ಅಗಲಿಕೆಯಿಂದ ಇಡೀ ಧಾರವಾಡ ಜಿಲ್ಲೆಯ ಭಕ್ತಗಣ ಶೋಕಸಾಗರದಲ್ಲಿ ಮುಳುಗುವಂತಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಈರೇಶ ಅಂಚಟಗೇರಿ
ಮಹಾಪೌರರು
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ