ಸ್ಥಳೀಯ ಸುದ್ದಿ

ಗುರುಗಳ ಆಧ್ಯಾತ್ಮಿಕ ಲೋಕಕ್ಕೆ ಮಾರುಹೋದ ಶಿಷ್ಯ ಸುಹಾಸ ಯರೇಸಿಮಿ

ಬೆಂಗಳೂರು

ಜೀವನದಲ್ಲಿ ಬಂದ ನಿರಂತರ ನೋವುಗಳಿಗೆ ಹಾಗೂ ಬದುಕಿನ ದುಃಖಗಳಿಗೆ ಈ ಶಿಷ್ಯನಿಗೆ ಆಧ್ಯಾತ್ಮಿಕ ಲೋಕದ ಮೂಲಕ ಶಕ್ತಿ ತುಂಬಿದವರು ಇದೇ ಶ್ರೀ ಸಿದ್ದೇಶ್ವರ ‌ಶ್ರೀಗಳು.

ಇಂತಹ ಶಿಷ್ಯನೊಬ್ಬ ಗುರುಗಳನ್ನು ಜೀವನದಲ್ಲಿ ಕಂಡಂತಹ ಕೆಲವೊಂದಿಷ್ಟು ವಿಚಾರಗಳನ್ನು ಇಲ್ಲಿ ಹೇಳಿದ್ದಾರೆ. ಅವರ ಹೆಸರು ಸುಹಾಸ ಯರೇಸಿಮಿ ಅಂತಾ.

ನನ್ನ ಜೀವನದಲ್ಲಿ ಕಂಡ ಅತ್ಯಂತ ಪ್ರಿಯ ಗುರುಗಳಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು. ನನ್ನ ಜೀವನದಲ್ಲಿ ಬದಲಾವಣೆ ತಂದ ಮೊದಲ ಗುರು, ಜ್ಞಾನದ ಅರಿವು ಮೂಡಿಸಿದ ಮೊದಲ ಗುರು..
ಲೋಕದಲ್ಲೆಲ್ಲಾ ಕೋಟ್ಯಾನು ಕೋಟಿ ಶಿಷ್ಯರಿದ್ದು.. ಗ್ರೀಕ್ ದೇಶದ ಗುರು ಸಾಕ್ರೆಟಿಸ್ ಹೋಲುವ ನಮ್ಮ ಗುರುಗಳು..ಸ್ವಚ್ಛ ಮನಸ್ಸಿನಿಂದ ಅವರ ಪ್ರವಚನಗಳನು ನಾವು ಕೇಳಿದ್ದಲ್ಲಿ ಜ್ಞಾನ ,ಅರಿವು ಮೂಡದ ಮನುಷ್ಯನಿಲ್ಲ.. ಏಕಲವ್ಯನಂತ ಶಿಷ್ಯರಿಗೆ ಅಪ್ಪಟ ಗುರುವಾದ ಶ್ರೀ ಸಿದ್ದೇಶ್ವರ ಸ್ವಾಮಿ..
ಸರಳ ,ಸಜ್ಜನ, ಬಸವ, ಬುದ್ಧ, ವಾಲ್ಮೀಕಿ , ಕೃಷ್ಣ, ಅರ್ಜುನ ,ಧರ್ಮರಾಯ, ಪರಮಹಂಸರು ಮುಂತಾದ ಮಹಾನ್ ಗುರುಗಳನ್ನು ಇವರಲ್ಲಿ ಕಾಣಬಹುದು.
ಬೌದ್ಧ ಗುರು,ಕ್ರೈಸ್ತ ಗುರು, ಮುಸ್ಲಿಂ ಗುರು ,ಹಿಂದೂ ಗುರು, ಒಟ್ಟಾಗಿ ಮಾನವ ಧರ್ಮಗುರು ಇವರಾಗಿದ್ದಾರೆ..
ಭಾರತ್ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ನೀಡಿದ್ದಾಗ ಪ್ರಶಸ್ತಿ ತೆಗೆದುಕೊಂಡು ನಾನೇನು ಮಾಡಲಿ ಎಲ್ಲಿ ತೆಗೆದುಕೊಂಡು ಹೋಗಲಿ ಎಂದು ನಯವಾಗಿ ತಿರಸ್ಕರಿಸಿದವರು ಇವರು. .ಮಾನವ ಕುಲಕ್ಕೆ ಶಾಂತಿ, ಜ್ಞಾನ, ಅರಿವು ,ಮೂಡಿಸುವ ಗುರುಗಳಿವರು.

ಇಂದು ಲೋಕವನ್ನು ತ್ಯಜಿಸಿದ್ದಾರೆ, ದೈವಾಧೀನರಾಗಿದ್ದಾರೆ ಆದರೆ ಇವರ ಜ್ಞಾನದ ಹರಿವು ಲೋಕದಲ್ಲೆಲ್ಲಾ ಇದೆ, ಹರಡಿದೆ ಜ್ಞಾನದ ಭಂಡಾರವಿದೆ .ಧ್ಯಾನದ ಗ್ರಂಥಗಳಿವೆ ಇಲ್ಲಿ ನಮಗಾಗಿ ಅವರದ್ದೆಲ್ಲ ಜ್ಞಾನ ವಿದ್ಯೆ ಅರಿವು ಬಿಟ್ಟು ಹೋಗಿದ್ದಾರೆ . ಅಸ್ಥಿರವಾದ ದೇಹವನ್ನು ಬಿಟ್ಟು ಹೋಗಿದ್ದಾರೆ ಹೊರತು,

         

ಅವರ ಆತ್ಮ ಎಲ್ಲರ ಆತ್ಮದೊಂದಿಗೆ ಬೆರೆತಿದೆ. ಪರಮಾತ್ಮರಾಗಿದ್ದಾರೆ ನಮ್ಮ ಗುರುಗಳು ಎಂದು ಅವರ ಆಧ್ಯಾತ್ಮದ ಪ್ರವಚನಗಳನ್ನು ಕೇಳಿ ಶಿಷ್ಯರಾಗಿರುವ ಸುಹಾಸ ಯರೇಸಿಮಿ ಅವರು ಗುರುಗಳ ಆದರ್ಶವನ್ನು ಜೀವನದಲ್ಲಿ ಪಾಲಿಸಿಕೊಂಡು ಹೋಗುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button