ಸ್ಥಳೀಯ ಸುದ್ದಿ

ಗೌನ ಹೋರಾಟ ವಿಚಾರದಲ್ಲಿ ಗೆದ್ದ ಮೇಯರ್

Click to Translate

ಧಾರವಾಡ

ಮಹಾನಗರ ಪಾಲಿಕೆಗಳಲ್ಲಿ ಮಹಾಪೌರರು ಗೌನ ಧರಿಸುವ ಪದ್ದತಿ ಕುರಿತಂತೆ ರಾಜ್ಯ ಸರ್ಕಾರಕ್ಕೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಇದು ಬ್ರಿಟಿಷ್‌ ಪಧ್ಧತಿ ಅವರ ಬಳುವಳಿಯಾಗಿ ಬಂದ ಸಂಸ್ಕೃತಿಗೆ ವಿದಾಯ ನೀಡುವ ಮನವಿಗೆ ರಾಜ್ಯ ಸರ್ಕಾರದ ಮೌಖಿಕ ನಿರ್ಣಯದ ಅನ್ವಯ ಗೌನ ಧರಿಸುವದು ಬಿಡುವದು ಮಹಾಪೌರರ ವಿವೇಚನೆಗೆ ಬಿಟ್ಟಂತ ವಿಷಯವೆಂದು ತಿಳಿಸಲಾಗಿದೆ.

ಅದರನ್ವಯ ನಾನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರು ಈರೇಶ ಅಂಚಟಗೇರಿ ಯಾವತ್ತೂ ಯಾವದೇ ಗಣ್ಯರ ಆಹ್ವಾನ ಸಮಯದಲ್ಲಿ ಪಾಲಿಕೆ ಸಭೆಗಳಲ್ಲಿ ಹಾಗೂ ಇನ್ನಿತರ ಯಾವುದೇ ಸಂದರ್ಭದಲ್ಲಿ ಗೌನ ಧರಿಸುವದಿಲ್ಲವೆಂದು ನಿರ್ಣಯಿಸಿದ್ದೇನೆ.ಹಾಗೂ ರಾಜ್ಯ ಸರ್ಕಾರದ ನಿರ್ಣಯವನ್ನು ಸ್ವಾಗತಿಸುತ್ತೇನೆ.

ನಾವು ನೀವೆಲ್ಲ ಒಟ್ಟಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನ ಬೃಹತ್ ಮಹಾನಗರ ಪಾಲಿಕೆ ಮಾಡುವ ನಿಟ್ಟಿನಲ್ಲಿ ಹಾಗು ನಮ್ಮನ್ನು ಆಯ್ಕೆ ಮಾಡಿದ ಜನತೆಗೋಸ್ಕರ ಅಭಿವೃದ್ಧಿ ಕಾರ್ಯಗಳನ್ನು ಒಟ್ಟಿಗೆ ನಿರ್ವಹಿಸೋಣ.

ತಮ್ಮೆಲ್ಲರ ಸಹಕಾರದಿಂದ ಅವಳಿನಗರ ರಾಜ್ಯದಲ್ಲೇ ಮಾದರಿ ಮಹಾನಗರ ಪಾಲಿಕೆ ನಿರ್ಮಾಣದ ಕಡೆ ಕೈಜೋಡಿಸಲು ತಮ್ಮೆಲ್ಲರ ಸಹಕಾರ ಕೋರುತ್ತೇನೆ ಎಂದು ಮೇಯರ್ ಪ್ರಕಟಣೆ ಮೂಲಕ ಹೇಳಿಕೊಂಡಿದ್ದಾರೆ.

ಧನ್ಯವಾದಗಳು
ತಮ್ಮ ಸೇವಕ
ಈರೇಶ ಅಂಚಟಗೇರಿ
ಮಹಾಪೌರರು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

Related Articles

Leave a Reply

Your email address will not be published. Required fields are marked *

Back to top button