ಸ್ಥಳೀಯ ಸುದ್ದಿ

ಗ್ರಾಮೀಣ ಕ್ಷೇತ್ರದಿಂದ ವಿನಯ್ ಕುಲಕರ್ಣಿ ಸ್ಪರ್ಧೆಗೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕೊಡಬೇಕೆಂದು ರಕ್ತದಲ್ಲಿ ಮನವಿ ಸಲ್ಲಿಕೆ

ಧಾರವಾಡ

ಧಾರವಾಡ ಬಾರಾಕೋಟ್ರಿಯಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮನೆಯ ಮುಂದೆ ಧಾರವಾಡ – 71 ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ -71 ನೇತೃತ್ವದಲ್ಲಿ,ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು,ಮುಖಂಡರು ಧರಣಿ ನಡೆಸಿದರು‌.

ಧಾರವಾಡ-71 ಕ್ಷೇತ್ರದ ಜೊತೆ ಶಿಗ್ಗಾಂವಿ ಕ್ಷೇತ್ರದ ಲ್ಲಿ ಸ್ಪರ್ಧೆ ಕುರಿತು ಚರ್ಚೆ ನಡೆಯುತ್ತಿದೆ.
ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತಿದೆ.

ಧಾರವಾಡ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕೈಕೊಂಡಿದ್ದಾರೆ.

ಅಲ್ಲದೇ ಜನರ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡ ಜನಪ್ರಿಯ ನಾಯಕರಾಗಿದ್ದಾರೆ. ಆದ್ದರಿಂದ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಲು ವಿನಯ ಕುಲಕರ್ಣಿಯವರು ಶೀಘ್ರ ತೀರ್ಮಾನ ಕೈಕೊಳ್ಳಬೇಕು. ಪಕ್ಷದ ವರಿಷ್ಠರು ಕೂಡ ಅವಕಾಶ ಕಲ್ಪಿಸಿ ಕೊಡಬೇಕು.

ಇಲ್ಲದೇ ಹೋದಲ್ಲಿ ಧಾರವಾಡ -71 ಬ್ಲಾಕ್ ಕಾಂಗ್ರೆಸ ನ ಎಲ್ಲ ಪದಾಧಿಕಾರಿಗಳು,ಮುಖಂಡರು ಸಾಮೂಹಿಕ ರಾಜೀನಾಮೆ ಕೊಡುತ್ತೇವೆ ಎಂದು ಆಗ್ರಹಿಸಿದರು.

ಇದೇ ಸಂಧರ್ಭದಲ್ಲಿ ಅಭಿಮಾನಿಬಳಗದಿಂದ ರಕ್ತದಲ್ಲಿ ಪತ್ರಬರೆದು ಪ್ರದರ್ಶಿಸಿ ಅಭಿಮಾನ ತೋರಿದರು.

ಪ್ರತಿಭಟನೆಯಲ್ಲಿ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ
ಪರಮೇಶ ಕಾಳೆ, ಚನಬಸಪ್ಪ ಮಟ್ಟಿ, ಅಣ್ಣಪ್ಪ ಚಿನಗುಡಿ, ಕಿಶೋರ ಬಡಿಗೇರ, ಮಂಜು ಭೀಮಕ್ಕನವರ,
ಆಯ್ .ಎಸ್. ಏಣಗಿ, ನಂದೀಶ ನಾಯ್ಕರ, ಮಿಲಿಂದ ಇಚ್ಚಂಗಿ,ಮೈಲಾರಗೌಡ ಪಾಟೀಲ ಗೌರಮ್ಮ ಬಳೋಗಿ, ಬಸವರಾಜ ಜಾಧವ, ನವೀನ ಕದಂ,ಸಿದ್ದು ತಿದಿ,ಸೂರಜ ಪುಡಕಲಕಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button