ಧಾರವಾಡ

ಗ್ರಾಮೀಣ ಶಾಸಕರೇ ನಿಮ್ಮ ಕ್ಷೇತ್ರದ ರಸ್ತೆ‌ ನೋಡಿ ಒಮ್ಮೆ…..ಇದೇನಾ ರಸ್ತೆ ಅಭಿವೃದ್ಧಿ…..

ಧಾರವಾಡ

ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾದ ಅಮೃತ‌ ದೇಸಾಯಿ ಅವರು 71 ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ಎಲ್ಲರಿಗೂ ಇದೆ.

ಆದ್ರೆ ರಸ್ತೆಗಳ ಅಭಿವೃದ್ದಿ ವಿಷಯಕ್ಕೆ ಬಂದ್ರೆ ಗ್ರಾಮೀಣ ಶಾಸಕರ ಕೆಲಸಗಳಿಗೆ ಮಾತ್ರ ಜನರು ಇದೇನಾ ಅಭಿವೃದ್ಧಿ ಎನ್ನುವಂತೆ ಆಗಿದೆ.

ಇದಕ್ಕೆ ಕೆಲವೊಂದು ತಾಜಾ ಉದಾಹರಣೆಗಳು ಇಲ್ಲಿದೆ ನೋಡಿ.

1) ಧಾರವಾಡದ ಹೆಬ್ಬಳ್ಳಿಯಿಂದ – ಕವಲಗೇರಿ- ಅಮ್ಮಿನಭಾವಿ‌ ರಸ್ತೆ ಮಾರ್ಗ – ಈ ರಸ್ತೆಯನ್ನು ನೋಡಿದ್ರೆ ನಿತ್ಯ ಓಡಾಡುವ ವಾಹನ ಸವಾರರು ಶಾಸಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

2) ತಡಕೊಡ ಗ್ರಾಮದಿಂದ ಬೈಲಹೊಂಗಲ ಹೋಗುವ ರಸ್ತೆ- ಇಲ್ಲಿ ಒಮ್ಮೆ ಹೋಗಿ ಬಂದ್ರೆ ಕ್ಷೇತ್ರದ ರಸ್ತೆ ಅರಿವಾಗುತ್ತದೆ.

3) ಕಮಲಾಪೂರದಿಂದ ಯಾದವಾಡಕ್ಕೆ ಹೋಗುವ ರಸ್ತೆ- ಇದು ಕೂಡ ಹಾಳಾಗಿ ಹೋಗಿದೆ.

4 ) ಎತ್ತಿನಗುಡ್ಡ ರಸ್ತೆ- ಇಲ್ಲಿಂದ ನೇರವಾಗಿ‌ ಕೃಷಿ ವಿಶ್ವವಿದ್ಯಾಲಯಕ್ಕೆ ಹೋಗುವ ವಾಹನ ಸವಾರರಿಗೆ‌ ಈ ರಸ್ತೆ‌ ಅನುಕೂಲವಾಗಿದೆ. ಆದ್ರೆ‌ ಇಲ್ಲಿ ಹದಗೆಟ್ಟ ರಸ್ತೆ ಅನಾನುಕೂಲತೆಯನ್ನು ಉಂಟು ಮಾಡಿದೆ.

5) ಧಾರವಾಡ ನಗರದ ಬಹುತೇಕ ಏರಿಯಾಗಳು ಗ್ರಾಮೀಣ ಶಾಸಕರಿಗೆ ಬರುವಂತಹದ್ದು ಇವೆ. ಇಲ್ಲಿ ಶಾಸಕರು‌ ಮಾತ್ರ ನೋಡೊಣ ಮಾಡೋಣ ಎನ್ನುವ ಮಾತುಗಳನ್ನು ಆಡಿ‌ ಕೆವಲ ಭರವಸೆಯಿಂದಲೇ ಅನುದಾನ ಬಂದ ಮೇಲೆ ಮಾಡೊಣ ರಸ್ತೆ ಅಭಿವೃದ್ದಿ ಎನ್ನುವ ಉದ್ದೇಶ ಹೊಂದಿರುವಂತೆ ಕಾಣುತ್ತಿದೆ.

Related Articles

Leave a Reply

Your email address will not be published. Required fields are marked *

Back to top button