ಸ್ಥಳೀಯ ಸುದ್ದಿ
ಜಗಳ ಬಿಡಿಸಲು ಹೋಗಿದ್ದ ವ್ಯಕ್ತಿ ಸಾವು..!
![](https://www.powercity.news/wp-content/uploads/2022/03/IMG_20220309_135842.jpg)
ಧಾರವಾಡ
ಜಗಳ ಬಿಡಿಸಲು ಹೋಗಿದ್ದ ವ್ಯಕ್ತಿಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಗಾಯಗೊಂಡಿರುವ ಆತ ಸಾವನ್ನಪ್ಪಿರುವ ಘಟನೆ ನಗರದ ಪೆಂಡಾರ್ ಗಲ್ಲಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಪೆಂಡಾರ್ ಗಲ್ಲಿಯಲ್ಲಿ ಮದುವೆ ಸಮಾರಂಭವೊಂದರಲ್ಲಿ, ಊಟದ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಈ ಜಗಳ ಬಿಡಿಸಲು ಹೋದ ಸಾದಿಕ್ ಬಿಡ್ನಾಳ ಎಂಬ ವ್ಯಕ್ತಿಯು ತಳ್ಳಾಟ, ನೂಕಾಟದಲ್ಲಿ ಸಿಲುಕಿದ್ದರಿಂದ ಆತನ ತಲೆಗೆ ಗೇಟ್ ಬಡಿದು ಸಾವನ್ನಪ್ಪಿದ್ದಾನೆ.
![](http://powercity.news/wp-content/uploads/2022/03/IMG-20220309-WA0031.jpg)
ರಿಜ್ವಾನ್ ಎಂಬಾತ ಸಾದಿಕ್ನನ್ನು ತಳ್ಳಿದ್ದರಿಂದ ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯದಲ್ಲಿಯೇ ಸಾದಿಕ್ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ, ಆರೋಪಿ ರಿಜ್ವಾನ್ನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.