ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಜನಸ್ನೇಹಿ ಪೊಲಿಸ್ ಅಧಿಕಾರಿಗಳನ್ನ ಸನ್ಮಾನಿಸಿದ :ವೆಂಕಟಗಿರಿ ಡೆವಲಪರ್ಸ!

ಹುಬ್ಬಳ್ಳಿ : ಗಣೇಶ ಚತುರ್ಥಿಯ ನಿಮಿತ್ತ ವೆಂಕರಡ್ಡಿ ಪ್ಲಾಜಾದಲ್ಲಿ ಮ್ಮಿಕೊಳ್ಳಲಾಗಿದ್ದ. ಶ್ರೀ ಸತ್ಯನಾರಾಯಣ ಪೂಜಾ ಸಮಾರಂಭದಲ್ಲಿ ಸ್ನೇಹ ಪೂರಕ ವಾಗಿ ಪೂಜೆಯಲ್ಲಿ ಭಾಗಿಯಾದ ಜನಸ್ನೇಹಿ
ಪೊಲೀಸ್ ಅಧಿಕಾರಿಗಳಾದ ಎಸಿಪಿ ಶ್ರೀ ಮುತ್ತಣ್ಣ ಸರವಗೋಳ ವಿದ್ಯಾನಗರ ಠಾಣೆಯ ಸಿಪಿಐ ಹಾಗೂ ಪಿಎಸ್ಐ ಅವರನ್ನು ಶ್ರೀ ವೆಂಕರಡ್ಡಿ ಕಿರೇಸೂರ ಕುಟುಂಬಸ್ಥರು ಹಾಗೂ ವೆಂಕಟಗಿರಿ ಪ್ಲಾಜಾದ ವ್ಯಾಪಾರಿಗಳು ಪೂಜೆಯ ಬಳಿಕ ಸನ್ಮಾನಿಸಿ ಗೌರವಿಸಲಾಯಿತು.

ಸಂಧರ್ಭದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಿದ ಸಾಮಾಜಿಕ ಯುವ ಮುಖಂಡರಾದ ಶ್ರೀ ಮಂಜುನಾಥ ರೆಡ್ಡಿ ಕಿರೇಸೂರ ಕುಟುಂಬವನ್ನ ಗಣ್ಯರು ಅಭಿನಂದಿಸಿ ಶುಭ ಹಾರೈಸಿದರು. ವಿಶೇಷವಾಗಿ ಉಣಕಲ್ ಕ್ರಾಸ್ ಮತ್ತು ಸುತ್ತಮುತ್ತಲಿನ 3000 ಶಾಲಾ ವಿದ್ಯಾರ್ಥಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ ಕಾಂಗ್ರೆಸ್ ಮುಖಂಡ ಗಂಗಾಧರ ದೊಡವಾಡ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಎಂ ಡಿ ಮೆಣಸಿನಕಾಯಿ ಶಿಕ್ಷಣ ಪ್ರೇಮಿ ಆರ್ ಕೆ ಪಾಟೀಲ್ ರಮೇಶ್ ಕೊಪ್ಪದ ಬಸವರಾಜ, ಹೊಸಮನಿ ವಿನೋದ, ಬಾವಿಕಟ್ಟಿ ಶಂಕರ ಧಾರವಾಡ ಮುಂತಾದವರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button