ಬೆಂಗಳೂರುರಾಜಕೀಯರಾಜ್ಯಸ್ಥಳೀಯ ಸುದ್ದಿ
ಜಮಿನಿನ ವಿಚಾರ ಸಾರ್ವಜನಿಕರ ಎದುರಲ್ಲೆ ಭೀಕರ ಹಲ್ಲೆ!
ಹಾಡ ಹಗಲೇ ಯುವಕನ ಮೇಲೆ ಖಾರದ ಪುಡಿ ಎರಚಿ ಕುಡುಗೋಲಿನಿಂದ ಬರ್ಬರ್ ಏಟು :ದಾಳಿಕೊರನನ್ನು ಬೆನ್ನಟ್ಟಿ ಥಳಿಸಿದ ಸಾರ್ವಜನಿಕರು!
ಪವರ್ ಸಿಟಿ ನ್ಯೂಸ್: ಮಂಡ್ಯ – ಪಟ್ಟಣದಲ್ಲಿ ಹಾಡಹಗಲೇ ಕಾರದ ಪುಡಿ ಎರಚಿದ ಯುವಕನೊಬ್ಬ ಕುಡುಗೋಲನಿಂದ ವ್ಯಕ್ತಿಯೋರ್ವನ ಮೇಲೆ ಮನ ಬಂದಂತೆ ಥಳಿಸಿ ಕೊಲೆಗೆ ಯತ್ನಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದೆ.
ಜಮೀನಿನ ವಿಚಾರವಾಗಿ ಇಂದು ಚೆನ್ನರಾಜ್ ಎಂಬಾತನ ಮೇಲೆ ನಂದನ ಎಂಬ ಯುವಕ ತಾಲೂಕು ಕಛೇರಿಯ ಆವರಣದಲ್ಲಿ ಕುಡುಗೋಲನಿಂದ ಕತ್ತು, ಬೆನ್ನು ಸೇರಿದಂತೆ ಮನ ಬಂದಂತೆ ಥಳಿಸುತ್ತಿದ್ದ. ಇದನ್ನು ಅಲ್ಲಿಯೇ ಇದ್ದ ಕೆಲ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದರೆ, ಇನ್ನೂ ಕೆಲವರು ಆರೋಪಿ ನಂದನ ಎಂಬಾತನನ್ನು ಹಿಡಿದು ಥಳಿಸಿ ಹಲ್ಲೆ ತಪ್ಪಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಚೆನ್ನರಾಜ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಆರೋಪಿ ನಂದನನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.