ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ಜಿಮ್ ನಲ್ಲೇ ಬಡಿದಾಟ ಓರ್ವನ ತಲೆಗೆ ಗಂಭೀರ ಗಾಯ!
ಹುಬ್ಬಳ್ಳಿ
ಜಿಮ್ ಮಾಡುವ ವೇಳೆಯೆ ಹಲ್ಲೆ ಮಾಡಿದ ಪರಿಣಾಮವಾಗಿ ಗಿರಿಧರ್ ಎಂಬ ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ವಿದ್ಯಾನಗರದ ಪೊಲಿಸ್ ಠಾಣಾವ್ಯಾಪ್ತಿಯಲ್ಲಿ ನಡೆದಿದೆ.
ಎಂದಿನಂತೆ ಇಂದು ಕೂಡ ವಿದ್ಯಾನಗರದ ಜಿಮ್ ಒಂದರಲ್ಲಿ ವ್ಯಾಯಾಮ ಮಾಡುತ್ತಿದ್ದ ಯುವಕ ಗಿರಿಧರ್ ಗೆ ಕ್ಷುಲಕ ಕಾರಣಕ್ಕೆ ಜಗಳ ತೆಗೆದ ಸೂರಜ್ ಎಂಬ ಯುವಕ ಈ ವೇಳೆ ಅಲ್ಲಿಯೇ ಇದ್ದ “ವೇಟ್ ಬಾರ್” ನಿಂದ ಗಿರಿಧರ್ ನ ಮೇಲೆ ಎರಡು ಬಾರಿ ತಲೆಗೆ ಬಡದಿದ್ದಾನೆ.
ಕಿರುಚಿಕೊಂಡಾಗ ಕೂಡಲೆ ಅಲ್ಲಿಯೆ ಇದ್ದ ಇನ್ನೂಳಿದ ಯುವಕರು ಹಲ್ಲೆಯನ್ನು ತಡೆದು ಗಂಭೀರ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ವಿದ್ಯಾನಗರ ಪೊಲಿಸರು ಘಟನೆಯ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.