ಸ್ಥಳೀಯ ಸುದ್ದಿ

ಜಿಲ್ಲೆಯಲ್ಲಿ ನಡೆಯುತ್ತಿದೆ ಗಂಧದ ಮರಗಳ ಕಳ್ಳತನ

ಧಾರವಾಡ

ಸಿನಿಮಾ ಸ್ಟೈಲನಲ್ಲಿ ಜೀವಬೆದರಿಕೆ ಹಾಕಿ ಗಂದಧ ಮರ ಕಡಿದುಕೊಂಡು ಖದೀಮರು ಎಸ್ಕೇಪ್ ಆಗುತ್ತಿರುವ ಪ್ರಕರಣಗಳು ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ‌ ನಡೆಯುತ್ತಿವೆ.

ಹುಬ್ಬಳ್ಳಿ-ಧಾರವಾಡ ಪೊಲೀಸ ಆಯುಕ್ತರೇ ಈ ಸುದ್ದಿ‌ನೋಡಿ ನೋಡಲೇಬೇಕಾಗಿದೆ. ಏಕೆಂದ್ರೆ ಉಪನಗರ ಪೊಲೀಸ್ ಠಾಣೆಯ ಸಮೀಪವೇ ಇಂತಹ ಘಟನೆಗಳು ನಡೆಯುತ್ತಿವೆ.

ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ನಸುಕಿನ ಜಾವ ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು, ಕೈಯಲ್ಲಿ ತಲ್ವಾರ ಹಿಡಿದುಕೊಂಡು,
ಸುಮಾರು 8 ಜನರಿಂದ ತಂಡದಿಂದ ಸೆಕ್ಯೂರಿಟಿ ಬೆದರಿಸಿ ಗಂಧದ ಮರ ಕಡಿದುಕೊಂಡು ಹೋದ ಘಟನೆ ನಡೆದಿದೆ.

ಇದಕ್ಕೂ ಮೊದಲು ಎಸಿ ಮನೆಯಲ್ಲಿ ಹಾಗೂ ಸಿಇಓ ಮನೆಯಲ್ಲಿಯು ಗಂಧದ ಮರ ಕಡಿದುಕೊಂಡು ಹೋಗಿರುವ ಖದೀಮರು ಇವರೇ ಆಗಿದ್ದಾರೆ.‌

ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ಇದಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಡಿಸಿ ಮನೆಯ ಆವರಣದಲ್ಲಿಯೂ ಈ ಹಿಂದೆ ಒಂದು ತಂಡ ಗಂಧದ ಮರ ಕಡಿದುಕೊಂಡು ಹೋಗಿತ್ತು.

ಒಟ್ಟಾರೆಯಾಗಿ ಪ್ರಕರಣದ ಬಗ್ಗೆ ಅರಣ್ಯಾಧಿಕಾರಿ ಉಪ್ಪಾರ ಹೇಳುವುದು ಹೀಗೆ,
ಜಿಲ್ಲೆಯಲ್ಲಿ 25 ದಿನಗಳಿಂದ ನಿರಂತರವಾಗಿ ಗಂದಧಮರಗಳ ಕಳ್ಳತನವಾಗುತ್ತಿದೆ.

ಮೊದಲು ಜಿಲ್ಲಾಧಿಕಾರಿ ಮನೆ ಆವರಣದಲ್ಲಿ ನಡೆದಿದೆ. ನಂತರದಲ್ಲಿ
ಎಸಿ ಮನೆ ಆವರಣ, ಸಿಇಒ ಮನೆ ಆವರಣ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೆ ಆವರಣದಲ್ಲಿಯೂ ಕಳ್ಳತನವಾಗಿವೆ.

ಗಂಧದ ಮರಗಳ್ಳತನ ಮಾಡುವ ತಂಡವನ್ನು ಶೀಘ್ರವೇ ಬಂಧನ ಮಾಡುತ್ತೇವೆ ಎಂದಿದ್ದಾರೆ.

ಪೊಲೀಸ್ ಆಯುಕ್ತರಾದ ಲಾಬೂರಾಮ ಅವರು ಇನ್ನಾದ್ರೂ ಈ ಗಂಧಧ ಮರ ಕಳ್ಳತನ ಮಾಡುವ ಗ್ಯಾಂಗ್ ಬಂಧಿಸುವಲ್ಲಿ ಯಾವ ರೀತಿ ಕಾರ್ಯ ಪ್ರವೃತ್ತರಾಗ್ತಾರೆ ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button