ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಟ್ಟಲು ಸಹಾಯವಾಣಿ ಸಹಾಯಕ..
ಧಾರವಾಡ
ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಿರುಕುಳ ಬಾಲ್ಯವಿವಾಹ ತಡೆಗಟ್ಟಲು ನಾವೆಲ್ಲರೂ ಬದ್ಧರಾಗೋಣ ಎಂದು
ಫಾದರ್ ಪೀಟರ್ ಕರೆ ನೀಡಿದ್ರು.
ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಪರಿಯೋಜನೆ ಮಕ್ಕಳ ಸಹಾಯವಾಣಿ 1098 ಹಾಗೂ ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಧಾರವಾಡ ಮತ್ತು ಗ್ರಾಮ ಪಂಚಾಯಿತಿ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಅಂಗನವಾಡಿ ಕೇಂದ್ರಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ ಸಮಸ್ಯೆಗಳನ್ನು ಎದುರಿಸುತ್ತಿದ್ದು ಸರಕಾರ ಮತ್ತು ನಾವು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆ.
ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದು ಮಕ್ಕಳ ಮೇಲೆ ನಡೆಯುವ ಎಲ್ಲಾ ದೌರ್ಜನ್ಯಗಳನ್ನು ತಡೆಗಟ್ಟಲು ಸಹಾಯ ಮಾಡುತ್ತಿದೆ ಎಂದು ಹೇಳಿದರು.
ಮಕ್ಕಳ ಕಲ್ಯಾಣ ಸಮಿತಿ ಧಾರವಾಡದ ಸರ್ವ ಸದಸ್ಯರು ದೀಪಾ ದಂಡಾವತಿ ಮಾತನಾಡಿ ಜಿಲ್ಲೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳು ಕಾಣೆಯಾದ ಮಕ್ಕಳು ಸಮಾಜದಿಂದ ದೂರಾದ ಮಕ್ಕಳು ಬಾಲ್ಯವಿವಾಹಕ್ಕೆ ತುತ್ತಾಗುವ ಮಕ್ಕಳು ಕಂಡುಬಂದಲ್ಲಿ 1098 ಉಚಿತ ಸಹಾಯವಾಣಿಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಧಾರವಾಡ ಕಮಲಾ ಬೈಲೂರು ಗ್ರಾಮೀಣ ವಲಯ ಬ್ಯಾಹಟ್ಟಿ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ಗುರುರಾಜ್ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಗ್ರಾಮೀಣ ವಲಯದ ಹಟ್ಟಿ ಹುಬ್ಬಳ್ಳಿ ಸ್ನೇಹ ಶಿಕ್ಷಣ ಸಂಸ್ಥೆ ಹುಬ್ಬಳ್ಳಿ ನಿರ್ದೇಶಕರಾದ ನಾಗರತ್ನ ಜಡೆದ, ಬ್ಯಾಹಟ್ಟಿ ಪಿಡಿಒ ಶಿವನಗೌಡ ತಡಹಾಳ ಅನುಸೂಯ ತಳವಾರ್ ಹನುಮಂತಪ್ಪನವರ ಶಾಂತವಾದ ಶಾನವಾಡ ನಿರ್ಮಲಾ ದ್ಯಾಮನಗೌಡ್ರ ಬಸವನಗೌಡ ಜೀವನ ಗೌಡ ರೋಹಿತ್ ಮತ್ತಿಹಳ್ಳಿ ರವಿ ಬಂಡಾರಿ ಚಂದ್ರಶೇಖರ್ ದ್ರಾಕ್ಷಾಯಿಣಿ ಹಂಪನ್ನವರ್ ಗಿರಿಜಾ ವಿಠ್ಠಲ್ ವಟವಟಿ ಉಪಸ್ಥಿತರಿದ್ದರು.