ಸ್ಥಳೀಯ ಸುದ್ದಿ

ಜಿಲ್ಲೆಯಲ್ಲಿ ಯೂರಿಯಾ ಹಾಗೂ ಡಿಎಪಿ ಅತಿ ಹೆಚ್ಚು ರಸಗೊಬ್ಬರ ಮಾರಾಟ.

ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ನಿಗದಿಗಿಂತ ಮುಂಚೆಯೇ ಮುಂಗಾರು ಮಳೆ ಆಗಮಿಸಿದ್ದರ ಪರಿಣಾಮ ಜಿಲ್ಲೆಯಲ್ಲಿ ಎಲ್ಲೇಡೆ ಮಳೆಯಾಗಿದೆ. ಹೀಗಾಗಿ ರೈತಾಪಿ ವರ್ಗದವರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕೃಷಿ ಇಲಾಖೆ ರೈತರಿಗೆ ರಸಗೊಬ್ಬರಗಳ ಪೂರೈಕೆಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.ಜಿಲ್ಲೆಯಲ್ಲಿ ಯೂರಿಯಾ ಹಾಗೂ ಡಿಎಪಿ ಅತಿ ಹೆಚ್ಚು ರಸಗೊಬ್ಬರ ಮಾರಾಟವಾಗಿದೆ.


ಜಿಲ್ಲೆಯಲ್ಲಿ ಕೃಷಿ ಇಲಾಖೆಯಲ್ಲಿ ಇರುವ ರಸಗೊಬ್ಬರ ದಾಸ್ತಾನಿನ ಬಗ್ಗೆ ರೈತರಿಗೆ ಮಾಹಿತಿ ಕೊಡುವಂತಹ ಕೆಲಸವನ್ನು ಪವರ್ ಸಿಟಿ ನ್ಯೂಸ್ ತಂಡ ಮಾಡುತ್ತಿದೆ.

ಜಿಲ್ಲೆಯಲ್ಲಿ ಎಪ್ರೀಲ್​ನಿಂದ ಸೆಪ್ಟೆಂಬರವರೆಗೂ ಮುಂಗಾರು ಹಂಗಾಮಿನಿಲ್ಲಿ 60164 ಮೆಟ್ರಿಕ್​ ಟನ್​ ಬೇಡಿಕೆ ಇತ್ತು. ಅದರಲ್ಲಿ
ಡಿಎಪಿ 18613 ಮೆಟ್ರಿಕ್​ ಟನ್​-
ಯೂರಿಯಾ- 23936 ಮೆಟ್ರಿಕ್​ ಟನ್​
ಎಂಓಪಿ- 2777 ಮೆಟ್ರಿಕ್​ ಟನ್​
ಕಾಂಪ್ಲೇಕ್ಸ್ 14095 ಮೆಟ್ರಿಕ್​ ಟನ್​ ಬೇಡಿಕೆ ಇತ್ತು….

ಅದೇ ರೀತಿಯಾಗಿ ಎಪ್ರೀಲ್​ನಿಂದ ಮೇ ವರೆಗೂ ಬೇಡಿಕೆ ನೋಡುವುದಾದರೆ,
ಯೂರಿಯಾ-7520 ಮೆಟ್ರಿಕ್​ ಟನ್​
ಡಿಎಪಿ- 12617 ಮೆಟ್ರಿಕ್​ ಟನ್​
ಎಂಓಪಿ- 1222 ಮೆಟ್ರಿಕ್​ ಟನ್​
ಕಾಂಪ್ಲೇಕ್ಸ್- 6413 ಮೆಟ್ರಿಕ್​ ಟನ್​ ಸೇರಿದಂತೆ ಒಟ್ಟು 28,177 ಮೆಟ್ರಿಕ್​ ಟನ್​ ರಸಗೊಬ್ಬರ ಜಿಲ್ಲೆಗೆ ಬೇಡಿಕೆ ಇತ್ತು…

ಸಧ್ಯಕ್ಕೆ ಜಿಲ್ಲೆಯ ಎಲ್ಲಾ ಗೌಡೌನಗಳಲ್ಲಿ ರಸಗೊಬ್ಬರ ದಾಸ್ತಾನು ಇರುವುದರ ಬಗ್ಗೆ ನೋಡುವುದಾದರೆ, 27-05-2022 ರವರೆಗೂ
ಯೂರಿಯಾ -8546 ಮೆಟ್ರಿಕ್​ ಟನ್​ ದಾಸ್ತಾನು ಆಗಿದ್ದು, ಅದರಲ್ಲಿ 3618 ಮೆಟ್ರಿಕ್ ಟನ್​ ಮಾರಾಟವಾಗಿದೆ.
ಡಿಎಪಿ-3553 ಮೆಟ್ರಿಕ್​ ಟನ್​ ದಾಸ್ತಾನು ಇದ್ದು, ಅದರಲ್ಲಿ 3171 ಮೆಟ್ರಿಕ್​ ಟನ್​ ಮಾರಾಟವಾಗಿದೆ.
ಎಂಓಪಿ-0549 ಮೆಟ್ರಿಕ್​ ಟನ್​ ದಾಸ್ತಾನು ಇದ್ದು, 1165 ಮೆಟ್ರಿಕ್​ ಟನ್​ ಮಾರಾಟವಾಗಿದೆ.
ಕಾಂಪ್ಲೇಕ್ಸ್ – 3674 ಮೆಟ್ರಿಕ್​ ಟನ್​ ದಾಸ್ತಾನು ಇದ್ದು, ಅದರಲ್ಲಿ 2151 ಮೆಟ್ರಿಕ್​ ಟನ್​ ಮಾರಾಟವಾಗಿದೆ.
ಒಟ್ಟು ದಾಸ್ತಾನು ಇದ್ದ ರಸಗೊಬ್ಬರದಲ್ಲಿ 1600 ಮೆಟ್ರಿಕ್​ ಟನ್​ ಪೈಕಿ, 9000 ಮೆಟ್ರಿಕ್​ ಟನ್​ ರಸಗೊಬ್ಬರ ಮಾರಾಟವಾಗಿದೆ.

ನಿನ್ನೆ ಮೊನ್ನೆ 2 ದಿನಗಳಲ್ಲಿ ಜಿಲ್ಲೆಗೆ ಪಿಪಿಎಲ್​ ಕಂಪನಿಯಿಂದ 420 ಮೆಟ್ರಿಕ್​ ಟನ್​, 800 ಮೆಟ್ರಿಕ್​ ಟನ್​ ಕ್ರಿಬ್ಕೊ ಕಂಪನಿಯಿಂದ , ಐಪಿಎಲ್​ ಕಂಪನಿಯಿಂದ 800 ಮೆಟ್ರಿಕ್ ಟನ್​ ಹಾಗೂ ಆರ್​ಸಿಎಫ್​ ಕಂಪನಿಯಿಂದ 600 ಮೆಟ್ರಿಕ್​ ಟನ್​ ಸೇರಿದಂತೆ ಒಟ್ಟು 2620 ಮೆಟ್ರಿಕ್​ ಟನ್​ ರಸಗೊಬ್ಬರ ಜಿಲ್ಲೆಗೆ ಬಂದಿದೆ…

ಜಿಲ್ಲೆಗೆ ಇನ್ನು 2 ದಿನಗಳಲ್ಲಿ ಡಿಎಪಿ 3750 ಮೆಟ್ರಿಕ್​ ಟನ್​ ಹಾಗೂ ಆರ್​ಸಿಎಫ್​ ಸಂಸ್ಥೆಯಿಂದ 3000 ಮೆಟ್ರಿಕ್​ ಟನ್​ ಹಾಗೆನೆ ಇಫ್ಕೋ ಕಂಪನಿಯಿಂದ 750 ಮೆಟ್ರಿಕ್ ಟನ್​ ರಸಗೊಬ್ಬರ ಬರುವುದಿದೆ. ಇನ್ನು ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಉಳಿದೆಲ್ಲಾ ಅಧಿಕಾರಿಗಳು ರೈತರಿಗೆ ರಸಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ.

ಪವರ್​ ಸಿಟಿ ನ್ಯೂಸ್ ಸತ್ಯ ಸದಾಕಾಲ….

Related Articles

Leave a Reply

Your email address will not be published. Required fields are marked *

Back to top button