ಸ್ಥಳೀಯ ಸುದ್ದಿ

ಜೆಎಸ್ಎಸನ ಮಂಜುನಾಥೇಶ್ವರ ‌ಆಂಗ್ಲ‌ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನ‌ ಆಚರಣೆ

ಧಾರವಾಡ

ಧಾರವಾಡದ ಮೃತ್ಯುಂಜಯ ನಗರದಲ್ಲಿನ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ
ವಿಶ್ವ ಪರಿಸರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು.

ಇಡೀ ದಿನ ಮಕ್ಕಳು ಬೇರೆ ಬೇರೆ ಚಟುವಟಿಕೆಗಳ ಮೂಲಕ ಪರಿಸರ ಜಾಗೃತಿ ಮೂಡಿಸಿದರು.

ಸಾಲುಮರದ ತಿಮ್ಮಕ್ಕನ ವೇಷಧಾರಿಯಲ್ಲಿ‌ ಮಕ್ಕಳು ಮಿಂಚಿದ್ದು ಒಂದು ಕಡೆಯಾದ್ರೆ
ಅಪ್ಪಿಕೋ ಚಳುವಳಿಯ ಭಾಗವಾಗಿ ತಮ್ಮ ಇಷ್ಟದ ಮರಗಳನ್ನು ತಬ್ಬಿಕೊಂಡ ಮಕ್ಕಳ ಮರಗಳನ್ನು ಕಡೆಯದಂತೆ ಸಂದೇಶ ಸಾರಿದರು.
ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಮಕ್ಕಳಿಗೆ ಭಾಷಣದ ಮೂಲಕ ಪರಿಸರದ ಅಗತ್ಯತೆ ಹಾಗೂ ಪ್ರಾಮುಖ್ಯತೆಯನ್ನು ತಿಳಿಸಿದರು.

ಸಾಲುಮರದ ತಿಮ್ಮಕ್ಕನ ವೇಷಭೂಷಣವನ್ನು ಧರಿಸಿದ ವಿದ್ಯಾರ್ಥಿನಿ ವೈಷ್ಣವಿ ಅವಾರಿ ಮರಗಳ ಮಹತ್ವವನ್ನು ಕುರಿತಾದ ಮಾತುಗಳಿಂದ ಎಲ್ಲರ ಗಮನ ಸೆಳದಳು. ಸುಂದರ್ ಲಾಲ್ ಬಹುಗುಣ ಅವರ ಜೀವನಾಧಾರಿತ ಕಿರು ನಾಟಕವನ್ನು ಪ್ರದರ್ಶಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button