ಟಿಕೇಟ್ ಗೆ ಮನವಿ ನೀಡಿದ ಬೆನ್ನಲ್ಲೇ ಪಕ್ಷದಿಂದ ಉಚ್ಛಾಟನೆ ಗೊಳಿಸಿದ AIMIM!
Powercity news :ಅಸಾದುದ್ದಿನ ಓಐಸಿ ನೇತೃತ್ವದ AIMIM ಪಕ್ಷದಲ್ಲಿ ಗುರುತಿಸಿಕೊಂಡು ಅವಳಿನಗರದಲ್ಲಿನ ಅನೇಕ ಜನಪರ ಹೋರಾಟದಲ್ಲಿ ಬಾಯಿಮಾತಾಗಿರುವ ವಿಜಯ ಗುಂಟ್ರಾಳ್ ಅವರನ್ನೇ ಪಕ್ಷದಿಂದ ಉಚ್ಛಾಟಿಸಿ ಆದೇಶ ಹೊರಡಿಸಿ ಅವಮಾನಿಸಿರುವ ಘಟನೆಗೆ ಸಂಭಂದಿಸಿದಂತೆ ವಿಜಯ ಗುಂಟ್ರಾಳ್ ತಮ್ಮ ಅಭಿಪ್ರಾಯ ಹೀಗೆ ವ್ಯಕ್ತಪಡಿಸಿದ್ದಾರೆ.
ಮಾದಿಗರು ಮಾಡಿರುವ ಅನ್ಯಾಯವಾದರೂ ಏನು.?
ಮಾದಿಗರಿಗೇ ಏಕೆ ಈ ದೌರ್ಜನ್ಯ..? ನಮ್ಮ ಹೋರಾಟಕ್ಕೆ ಬೆಲೆ ಇಲ್ಲವೇ.?
ಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನಸಭಾ ಮೀಸಲು ಕ್ಷೇತ್ರದ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಬಹುದೊಡ್ಡ ಮಾದಿಗ ಸಮುದಾಯ ಮಾಡಿರುವ ಅನ್ಯಾಯವಾದರೂ ಏನು? ಮಾಡಿರುವ ತಪ್ಪಾದರೂ ಏನು? ಧ್ವನಿ ಇಲ್ಲದ ಸಮುದಾಯಕ್ಕೆ ಧ್ವನಿಯಾಗಿರುವುದೇ ತಪ್ಪಾ.?
ಯಾವುದೇ ಪಕ್ಷವಾಗಲಿ ದಲಿತ ಅದರಲ್ಲೂ ಮಾದಿಗ ಸಮುದಾಯ ಎಂದರೆ ಅಷ್ಟೇಕೆ ತತ್ಸಾರ ಮಾಡುತ್ತಿವೆಯೋ ತಿಳಿಯದಾಗಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೂ ಅನ್ಯಾಯ, ಇದೀಗ ಏನೆಂದರೆ ಏನೂ ತಿಳಿಯದಾಗಿದ್ದ, ಹುಬ್ಬಳ್ಳಿಯ ಬಹುಜನರಿಗೇ ಗೊತ್ತೆ ಇಲ್ಲದ ಪಕ್ಷವನ್ನು ಕಟ್ಟಿ ಬೆಳೆಸಿ ನಾಲ್ಕು ಜನರ ನಡುವೆ ಎದ್ದು ನಿಲ್ಲುವಂತೆ ಮಾಡಿದ ಎ.ಐ.ಎಂ.ಐ.ಎಂ. ಪಕ್ಷದಿಂದಲೂ ಅನ್ಯಾಯ. ನಾವು ಮಾಡಿರುವ ತಪ್ಪಾದರೂ ಏನು? ಸಾಮಾಜಿಕ ಕಳಕಳಿಯಿಂದ ಕಾರ್ಯ ನಿರ್ವಹಿಸುವುದೇ ತಪ್ಪಾ.? ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಿದ್ದಕ್ಕೆ ಇದೇನಾ ಬಹುದೊಡ್ಡ ಬಹುಮಾನ.?
ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸುವ ಸಮಯ ಒದಗಿ ಬಂದಿದೆ. ಇದಕ್ಕೆಲ್ಲ ನೇರ ಕಾರಣ ಶಾಸಕ ಪ್ರಸಾದ್ ಅಬ್ಬಯ್ಯ ಎಂಬುದು ಗೊತ್ತಿದೆ. ನೇರವಾಗಿ ಚುನಾವಣಾ ರಣರಂಗದಲ್ಲಿ ಎದುರಿಸಲಾಗದೇ ಕುತಂತ್ರದಿಂದ ಶಿಖಂಡಿ ಪಾತ್ರ ವಹಿಸುತ್ತಿರುವ ಆತನ ಮಾದಿಗ ವಿರೋಧಿ ನೀತಿ ಖಂಡನಿಯ.
ಇದು ಕೊನೆ ಅಲ್ಲ ಆರಂಭ. ಹೊಸ ಅಧ್ಯಾಯ ಈಗ ಆರಂಭವಾಗಲಿದೆ. ಆತನ ಕುತಂತ್ರಕ್ಕೆ ತಕ್ಕ ತಂತ್ರ ಹೂಡುವ ಕಾಲ ಇದೀಗ ಬಂದಿದ್ದು ಮುಂದಿನ ದಿನಗಳಲ್ಲಿ ಎಲ್ಲವನ್ನೂ ಕಾಲವೇ ನಿರ್ಧರಿಸಲಿದೆ.
ಸಧ್ಯಕ್ಕೆ ವಿಜಯ ಗುಂಟ್ರಾಳ್ ವರು ಉಚ್ಛಾಟನೆಯಂತಹ ತಪ್ಪು ಎಸಗುವಷ್ಟು ಪ್ರಜ್ಞಾಹೀನರಲ್ಲ ಅನ್ನೋದು ಕೂಡ ಅಷ್ಟೇ ಸತ್ಯವಾಗಿದೆ.