ಸ್ಥಳೀಯ ಸುದ್ದಿ

ಟ್ಯಾಂಕರ್ ನೀರಿನ ಸಮಸ್ಯೆ ಕುರಿತು ನವನಗರದಲ್ಲಿ ಮೇಯರ್ ಸಭೆ

ನವನಗರ

ಹುಬ್ಬಳ್ಳಿ – ಧಾರವಾಡ ಮಧ್ಯೆ ಭಾಗದಲ್ಲಿರುವ ನವನಗರದಲ್ಲಿ 10 ದಿನಗಳಿಂದ ಕುಡಿಯುವ ನೀರಿನ ಸರಬರಾಜು ಅವ್ಯವಸ್ಥೆಯ ಹಿನ್ನೆಲೆಯಲ್ಲಿ, ಸಾರ್ವಜನಿಕರು ಹಾಗೂ ಸ್ಥಳೀಯ ಪಾಲಿಕೆಯ ಸದಸ್ಯರ ಕರೆಯ ಮೇರೆಗೆ, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು, ನವನಗರದ ವಲಯ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರೊಂದಿಗೆ ಒಂದು ಸಭೆಯನ್ನು ನಡೆಸಿದ್ರು.


ಈ ಸಂದರ್ಭದಲ್ಲಿ ನಾಗರಿಕರಿಗೆ ಟ್ಯಾಂಕರ್ ಗಳ ಮೂಲಕ ಹಾಗೂ ಬೋರವೆಲ್ ಗಳ ರಿಪೇರಿಯ ಮೂಲಕ, ತುರ್ತಾಗಿ ನೀರು ಸರಬರಾಜು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು. ಹಾಗೂ ಇನ್ನು ಮುಂದಿನ ದಿನಗಳಲ್ಲಿ ಈ ರೀತಿ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಈ ಸಭೆಯಲ್ಲಿ ಪಾಲಿಕೆ ಸದಸ್ಯರಾದ ಶ್ರೀಮತಿ ಸುನೀತಾ ಮಾಳವದಕರ, ಮಹೇಶ ಬುರಲಿ ರವರು, ಶ್ರೀ ಗಿರೀಶ ಸವಳಿಜೋಶಿ ರವರು, ಶ್ರೀ ನರೇಂದ್ರ ಕುಲಕರ್ಣಿ ರವರು, ಶ್ರೀ ನಂದೇಡ್ಕರ ರವರು,ಕಾರ್ಯನಿರ್ವಾಹಕ ಅಭಯಂತರ ರಾದ ಶ್ರೀ ರವಿಕುಮಾರ ರವರು, ಎಲ್& ಟಿ ಅಧಿಕಾರಿಗಳಾದ ಶ್ರೀ ಅಭಿದಾಸ್ ರವರು, ಕೆ.ಐ.ಡಿ. ಎಫ್.ಸಿ ಅಧಿಕಾರಿಗಳು, ವಲಯ ಆಯುಕ್ತರಾದ ಶ್ರೀ ರಮೇಶ ನೂಲ್ವಿ ರವರು ಹಾಗೂ ಸ್ಥಳೀಯ ನಾಗರಿಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button