ಡಾಕ್ಟರ್ ಪ್ರಭಾಕರ್ ಯಾರೂ ಗೊತ್ತೆ?

powercity news: ವಾರ್ತೆ
ಹುಬ್ಬಳ್ಳಿ
ಹಳೆಹುಬ್ಬಳ್ಳಿ ಭಾಗದ ಆನಂದನಗರ ಎಂದರೆ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ಸುದ್ದಿಗೆ ಆಹಾರ ವಾಗುತ್ತಲೇ ಇದೆ. ಹಾಗಂತ ಇಲ್ಲಿ ವಾಸಿಸುವ ನಾಗರೀಕರು ಶ್ರೀಮಂತರಲ್ಲದಿದ್ದರು ಬಹುತೇಕರು ದಿನಗೂಲಿ,ಅಟೋ,ಟ್ರಕ್,ಕಟ್ಟಡ ಕಾರ್ಮಿಕರು ಸೇರಿದಂತೆ ಅನೇಕರು ತಮ್ಮ ಬದುಕು ಕಟ್ಟಿಕೊಂಡು ಜೀವನಸಾಗಿಸುವ ಜನಗಳ ಮಧ್ಯೆಯೇ ವೈದ್ಯ ವೃತ್ತಿಯ ಮೂಲಕ ಕೇವಲ ಆನಂದನಗರಕ್ಕಷ್ಟೆ ಅಲ್ಲದೆ ಅಕ್ಕ ಪಕ್ಕದ ಹಳ್ಳಿಗಳಿಂದಲೂ ಬರುವ ಅನಾರೋಗ್ಯ ಸಮಸ್ಯೆ ಪೀಡಿತರಿಗೆ ನಿಸ್ವಾರ್ಥ ಸೇವೆ ಗಯ್ಯುತ್ತ ಹೆಸರು ವಾಸಿಯಾಗಿರುವ ಡಾಕ್ಟರ್ ಪ್ರಭಾಕರ ಶಿವಸಿಂಪಿ ಯವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.

ಹೌದು ಆನಂದನಗರದ ಮೊದಲ ನೀರಿನ ಟಾಕಿ ಬಳಿ ಇರುವ ಸಂಜೀವಿನಿ ಹೆಸರಿನ ಕ್ಲೀನಿಕ್ ನಡೆಸುತ್ತಲೇ ಸಮಾಜ ಸೇವೆ ಹಾಗೂ ದಾನಕ್ಕೆ ಒಂದು ಕೈ ಮುಂದೆ ಎನ್ನುವ ಮನೋಭಾವದ ಡಾಕ್ಟರ್ ಪ್ರಭಾಕರ್ ಎಂದರೆ ಇಲ್ಲಿನ ಜನರಿಗೆ ಅಚ್ಚುಮೆಚ್ಚು.
ತಮ್ಮ ಚಿಕ್ಕ ಕುಟುಂಬ ಸದಸ್ಯರ ಪೈಕಿ ಇಬ್ಬರು ಪುತ್ರಿಯರು,ಪತ್ನಿ,ಹಾಗೂ ತಂದೆಯವರೊಂದಿಗೆ ಬದುಕು ಕಟ್ಟಿಕೊಂಡಿರುವ ಇವರಿಗೆ ಇರುವ ಹೆಣ್ಣುಮಕ್ಕಳ ಪೈಕಿ ಓರ್ವಳು ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮತ್ತೋರ್ವಳು ಕ್ರಿಕೇಟ್ ನಲ್ಲಿ ಸಾಧನೆ ಮಾಡಬಹುದಾದ ಎಲ್ಲ ಲಕ್ಷಣವನ್ನು ಹೊಂದಿದ್ದಾಳೆ. ಹೀಗೆ ತಮ್ಮೇರಡು ಮಕ್ಕಳನ್ನು ಬಹುದೊಡ್ಡ ಆಸ್ತಿಯಾಗಿ ಬೆಳೆಸುತ್ತಿರುವ ಡಾಕ್ಟರ್ ಪ್ರಭಾಕರ್ ಮಕ್ಕಳ ಬಗ್ಗೆ ಇ ಭಾಗದ ಜನರಲ್ಲಿ ಹೆಮ್ಮೆ ಮೂಡಿಸಿದೆ.
ಅದೇನೆ ಇರಲಿ ಪವರ್ಸಿಟಿ ನ್ಯೂಸ್ ತಂಡ ಇಂತಹ ಸಮಾಜದಲ್ಲಿ ಸಾರ್ವಜನಿಕ ಸೇವೆ ಮಾಡುತ್ತಲೆ ಎಲೆಯ ಮರೆಕಾಯಿಯಂತೆ ಜೀವನಸಾಗಿಸುತ್ತಿರುವ ಆನಂದನಗರದ ಸಂಜೀವಿನಿ ಕ್ಲೀನಿಕ್ ವೈದ್ಯರಾದ ಡಾಕ್ಟರ್ ಪ್ರಭಾಕರ್ ಅವರಿಗೆ ಮತ್ತೋಮ್ಮೆ ಜನುಮದಿನದ ಶುಭಾಶಯಗಳನ್ನು ತಿಳಿಸುತ್ತದೆ.
