ಸ್ಥಳೀಯ ಸುದ್ದಿ

ತನಿಖಾ ವರದಿಗೆ ಮತ್ತೊಂದು ಹೆಸರು ಆನಂದ ಸೌದಿ

ಬೆಂಗಳೂರು

ಆನಂದ ಸೌದಿ.. ಈ ಹೆಸರು ಈಗ ಬರಿ ಹೆಸರಲ್ಲ ವರದಿಗಾಕೆಯ ಬ್ರ್ಯಾಂಡ್.. ಯಾದಗಿರಿಯಲ್ಲಿ ಇವ್ರು ಡಾಕ್ಟರ್ ಸಾಬ್ ಅಂತಾನೇ ಫೇಮಸ್.. ತಂದೆ ವೃತ್ತಿಯಿಂದ ಡಾಕ್ಟರ್, ಆನಂದ್ ಸೌದಿ ಅವರು ಸಮಾಜದ ಡಾಕ್ಟರ್..!

ಸಾಮಾಜಿಕ ಕಳಕಳಿಯ ಪತ್ರಕರ್ತ ಆನಂದ್ ಸರ್ ಗೆ ಮಾಧ್ಯಮ ಅಕಾಡಮಿಯ ಪ್ರಶಸ್ತಿ ಲಭಿಸಿದ್ದು ಖುಷಿಯ ವಿಚಾರ.. ಉತ್ತಮ ತನಿಖಾ ವರದಿ ವಿಭಾಗದಲ್ಲಿ ಕೆಲ ದಿನಗಳ ಹಿಂದೆಯಷ್ಟೆ ಪತ್ರಕರ್ತರ ಸಂಘದ ಪ್ರಶಸ್ತಿ ಲಭಿಸಿತ್ತು.. ಇವತ್ತು ಮತ್ತೆ ಅಕಾಡಮಿ ಪ್ರಶಸ್ತಿ ಘೋಷಣೆಯಾಗಿದೆ.. ಡಬ್ಬಲ್ ಖುಷಿ..! ಆನಂದ್ ಸರ್ ಅವರಂಥ ಪತ್ರಕರ್ತರಿಗೆ ಎಷ್ಟು ಪ್ರಶಸ್ತಿ ಕೊಟ್ಟರೂ ಕಡಿಮೆ..

ಆನಂದ್ ಸೌದಿ ಸರ್ ಜೊತೆ ಬರೋಬ್ಬರಿ ಎರಡೂವರೆ ವರ್ಷ ಕೆಲಸ ಮಾಡಿದ ಅನುಭವ ನನ್ನದು.. ಪತ್ರಕರ್ತ ಹೇಗಿರಬೇಕು ಅಂತಾ ಯಾರಾದ್ರೂ ನನ್ ಕೇಳಿದ್ರೆ ನಿರ್ಬಿಡೆಯಿಂದ ಆನಂದ ಸೌದಿ ಅವರನ್ನ ತೋರಿಸ್ತೇನೆ.. a perfect role model for young journalist..

ನೀವು ನಂಬ್ಲೆ ಬೇಕು, ಸಂಜೆ ಆಗ್ತಿದ್ದಂತೆ ಆನಂದ್ ಸೌದಿ ಅವರನ್ನ ಭೇಟಿಯಾಗೋದಕ್ಕೆ ಜನ ಸಾಲುಗಟ್ಟಿ ಬರ್ತಾರೆ.. (ಡಾಕ್ಟರನ್ನ ಕಾಣೋದಕ್ಕೆ ಬರೋ ರೋಗಿಗಳಂತೆ) ಸಮಸ್ಯೆ ಹೇಳ್ಕೊಂಡು.. ಸಲಹೆ ಪಡೆಯೋದಕ್ಕೆ ಅಂತಾನೇ ದಿನವೊಂದಕ್ಕೆ ಮಿನಿಮಂ 15/20 ಜನ ಖಾಯಂ ವಿಜಿಟರ್ಸ್ ಇರ್ತಾರೆ.. ಅದ್ಕೆ ಏನೋ ಅವ್ರಿಗೆ ಈಗ್ಲೂ ಅನೇಕರು ಡಾಕ್ಟರ್ ಸಾಬ್ ಅಂತಾ ಕರೆಯೋದು..

ಪತ್ರಕರ್ತರ ವಲಯದಲ್ಲಿ ಆನಂದ ಸೌದಿ ಅವರು ಯಾರು ಅನ್ನೋದನ್ನ ಪ್ರತ್ಯೇಕವಾಗಿ ಪರಿಚಯ ಮಾಡೋ ಅಗತ್ಯ ಇಲ್ಲ.. ಕನ್ನಡ ಪ್ರಭ ಪತ್ರಿಕೆಯಲ್ಲಿ‌ನ ಸರಣಿ ಲೇಖನಗಳ ಮೂಲಕ ಸಂಚಲನ ಸೃಷ್ಟಿಸಿದ ಪತ್ರಕರ್ತ ಆನಂದ್ ಸೌದಿ.. #ಪಿಎಸ್ ಐ ಸ್ಕ್ಯಾಮ್ ನ ಹೊರಗೆಡವಿದ ಡೇರಿಂಗ್ ಜರ್ನಲಿಸ್ಟ್.. ಮುಂದೆ ಏನೇನಾಯ್ತು.. ಯಾರ್ಯಾರು ಒಳೆಗೆ ಹೋದ್ರು ಅನ್ನೋದನ್ನ ಪ್ರತ್ಯೇಕವಾಗಿ ಹೇಳ್ಬೇಕಿಲ್ಲ..

ಮೆಡಿಕಲ್ ಕಾಲೇಜು ಸರಣಿ ಲೇಖನದ ಇಂಪ್ಯಾಕ್ಟ್ ಯಾವ ಸಿನಿಮಾ ಸ್ಟೋರಿಗೆ ಕಡಿಮೆ ಇಲ್ಲ.. ಅದು 2019, ಜೂನ್ ತಿಂಗಳು.. ಆಗ ಸಿಎಂ ಆಗಿದ್ದ ಕುಮಾಸ್ವಾಮಿ, ಯಾದಗಿರಿಯ ಚಂಡರಕಿ ಗ್ರಾಮ ವಾಸ್ತವ್ಯಕ್ಕೆ ಬಂದಿದ್ರು.. ವಾಸ್ತವ್ಯ ಮುಗಿಸಿ ಮಾಧ್ಯಮದವರೊಂದಿಗೆ ಮಾತ್ನಾಡ್ತಾ, ಯಾದಗಿರಿಗೆ ಮೇಡಿಕಲ್ ಕಾಲೇಜು ಬೇಡ, ಇದ್ದ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸೋಣ‌, ಮೆಡಿಕಲ್ ಕಾಲೇಜು ಹೊರಗಿನ ವಿದ್ಯಾರ್ಥಿಗಳಿಗೆ ಲಾಭ..! ಜಿಲ್ಲೆಗೆ ಏನು ಅನುಕೂಲ ಅಂತಾ ಕುಮಾರಸ್ವಾಮಿ ಹೇಳಿಕೆ ನೀಡಿದ್ರು.. ಅವರ ನಿಲುವಿಗೆ ಸರಣಿ ಲೇಖನಗಳ ಮೂಲಕ ಉತ್ತರ ಕೊಟ್ಟವರು ಆನಂದ್ ಸೌದಿ.. ಮೆಡಿಕಲ್ ಕಾಲೇಜು ಸರಣಿ ಲೇಖನ ಆಗ ಸಂಚಲನ ಸೃಷ್ಟಿಸಿತ್ತು. ಯಾದಗಿರಿಗೆ ಮೆಡಿಕಲ್ ಕಾಲೇಜು ಯಾಕೆ ಅವಶ್ಯ ಅನ್ನೋದನ್ನ ಸರಣಿಯಲ್ಲಿ ಪ್ರಕಟಿಸಿದ್ದ ಸೌದಿ ಸರ್, ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ರು.. ವಿರೋಧ ಪಕ್ಷದಲ್ಲಿದ್ದ ಬಿಜೆಪಿ‌ ಸರಣಿ ಲೇಖನ ಗಮನಿಸಿ ಒಂದು ದಿನ ಯಾದಗಿರಿ ಬಂದ್ ಗೆ ಕರೆ ನೀಡಿತ್ತು.. ಸರಣಿ ಲೇಖನದಿಂದಾಗಿ ಯಾದಗಿರಿಗೆ ಮೆಡಿಕಲ್ ಕಾಲೇಜು ಬೇಕೆ ಬೇಕು ಅನ್ನೋ ಆದೋಲನ ಸ್ಟಾರ್ಟ್ ಆಯ್ತು.. ಸರಣಿ ಲೇಖನ ಕ್ರಾಂತಿ ಸೃಷ್ಟಿಸಿದ್ದ ದಿನ ಅದು.. ನಂತ್ರ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗಿದ್ದು ಈಗ ಇತಿಹಾಸ.. ನನಗೆ ಇನ್ನೂ ನೆನಪಿದೆ.. ಹೋರಾಟದ ಆರಂಭದ ದಿನಗಳವು.. ಮಾಜಿ ಶಾಸಕ ವೀರಬಸಂತ ರೆಡ್ಡಿ ಅವರು ನನ್ನ ಕರೆದು, ‘ಮೆಡಿಕಲ್ ಕಾಲೇಜು ಹೋರಾಟದ ಯಶ ಆನಂದ್ ಸೌದಿ ಹಾಗೂ ಟೀಮ್ ಗೆ ಸಲ್ಲುತ್ತೆ’ ಅಂತಾ ಹೇಳಿದ್ರು.. ಆ ಟೀಮ್ ನಲ್ಲಿ ನಾನೂ ಇದ್ದೆ.. ಹೀಗಾಗಿ ನನ್ನ ಖುಷಿಗೂ ಪರವೇ ಇರಲಿಲ್ಲ..

ಇನ್ನು, ರೈತ ಆತ್ಮ ಹತ್ಯೆ ಪ್ರಕರಣದಲ್ಲಿ ಯಾದಗಿರಿಯ ಕೆಲ ಕುಟುಂಬಕ್ಕೆ ಪರಿಹಾರ ಬಂದಿರಲಿಲ್ಲ.. ಸರ್ಕಾರದ ಕೆಲ ನಿಯಮಗಳು ತೊಡಕಾಗಿದ್ವು.. ಆ ನಿಯಮಗಳು ರೈತ ಕುಟುಂಬಕ್ಕೆ ಹೇಗೆ ಕಂಟಕವಾಗಿದೆ ಅನ್ನೋದನ್ನ ಆನಂದ್ ಸರ್ ಸರಣಿ ರೂಪದಲ್ಲಿ ಪ್ರಕಟಿಸಿದ್ರು.. ಸಿದ್ದರಾಮಯ್ಯ ಸರಣಿ ಲೇಖನಗಳನ್ನ ಪ್ರಸ್ತಾಪಿಸಿ ವಿಧಾನಸೌದದಲ್ಲಿ ಮಾತ್ನಾಡಿದ್ರು‌.. ಪರಿಣಾಮ, ಸರ್ಕಾರ ರೂಲ್ಸ್ ಬದಲಿಸಿತು.. ಎಲ್ಲರಿಗೂ ಪರಿಹಾರ ಸಿಗುವಂತಾಯ್ತು..

ಅವರಿಗಿರೋ ಟ್ಯಾಲೆಂಟ್ ಗೆ ಬೆಂಗಳೂರಿನ ಯಾವುದಾರೂ ಮೀಡಿಯಾ ಹೌಸ್ ನ ಸಂಪಾದಕರಾಗ್ಬಹುದಿತ್ತು.. ಆದ್ರೆ, ಆನಂದ್ ಸೌದಿ ಸರ್, ತಾಯಿಗಾಗಿ ಯಾದಗಿರಿಯಲ್ಲಿ ಉಳಿದುಕೊಂಡವರು.. ತಾಯಿ ಸಂವೇದನೆಯ ಗುಣ ಆನಂದ್ ಸರ್ ಅವರಲ್ಲಿದೆ.. ಹೀಗಾಗಿಗೆ ಮಾನವೀಯ ವರದಿಯಲ್ಲಿ ಅವರದ್ದು ಎತ್ತಿದ ಕೈ.. ಈ ಪ್ರಶಸ್ತಿಯ ಬಹುಪಾಲು ಅಮ್ಮನಿಗೆ ಸಲ್ಲಬೇಕು.. ಯಾಕಂದ್ರೆ ಆನಂದ ಸರ್ ಗೆ ಆ ಸೂಕ್ಷ್ಮತೆ ಬಂದಿದ್ದು ಅಮ್ಮನಿಂದ..

ಪ್ರಶಸ್ತಿ, ಸನ್ಮಾನಗಳಿಂದ ದೂರ ಓಡ್ತಿದ್ದ ಆನಂದ್ ಸರ್ ಗೆ ಈ ವರ್ಷ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಬರ್ತಿದೆ.. ಶುಭಾಶಯಗಳು ಸರ್.. ಇನ್ನೂ ಅನೇಕ ಪ್ರಶಸ್ತಿಗಳು ನಿಮಗೆ ಸಿಗುವಂತಾಗಲಿ ಎಂದು ಅಭಿಮಾನಿಗಳು, ಹಿತೈಶಿಗಳು , ಕುಟುಂಬದ ವರ್ಗದವರು ಅಭಿನಂದಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button