ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಘಟಿಕೋತ್ಸವ
ಧಾರವಾಡ
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಂಗಸಂಸ್ಥೆಗಳಾದ ಸಿ.ಬಿ.ಗುತ್ತಲ ಆಯುರ್ವೇದ ಮಹಾವಿದ್ಯಾಲಯ ಹಾಗೂ ಡಾ.ಬಿ.ಡಿ.ಜತ್ತಿ ಹೋಮಿಯೋಪಥಿ ಮಹಾವಿದ್ಯಾಲಯಗಳ ಪದವಿ ಪ್ರಧಾನ ಸಮಾರಂಭ ಇಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಎಫ.ಕೆ. ಸಿ ಹಾಲನಲ್ಲಿ ನಡೆಯಿತು.
ಕರ್ನಾಟಕ ರಾಜ್ಯದ ಘನವೆತ್ತ ರಾಜ್ಯಪಾಲರು ಥಾವರಚಂದ ಗೆಹ್ಲೊಟ ಹಾಗೂ ಕೇಂದ್ರ ಕಲ್ಲಿದ್ದಲು ಹಾಗು ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಪ್ರಲ್ಹಾದ ಜೋಶಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷರು ಹಾಗು ಮಹಾಪೌರರು ಈರೇಶ ಅಂಚಟಗೇರಿ ಅವರ ಘನ ಉಪಸ್ಥಿತಿಯಲ್ಲಿ ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಮೆಡಲ ಹಾಗು ಸರ್ಟಿಫಿಕೇಟ್ ನೀಡಿ ಶುಭ ಕೋರಲಾಯಿತು.
135 ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪದವಿ ಪ್ರಧಾನ ಮಾಡಲಾಯಿತು.
ಪ್ರಾಸ್ತಾವಿಕ ನುಡಿಗಳನ್ನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷರು ಹಾಗೂ ಮಹಾಪೌರ ಈರೇಶ ಅಂಚಟಗೇರಿ ಮಾತನಾಡಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಪ್ರಚಾರ ಹಾಗೂ ಪ್ರಸಾರ ಪ್ರಮುಖವಾಹಿನಿಯಾಗಿ ಕಾರ್ಯನಿರ್ವಹಿಸತಾ ಇದೆ ಹಾಗೂ ಹಿಂದಿ ಪ್ರಚಾರಕರಾಗಿ ಸೇವೆ ಸಲ್ಲಿಸಿದ ಸಮಸ್ತರನ್ನು ನೆನೆದು ವೈದ್ಯಕೀಯ ರಂಗದಲ್ಲಿ ಹಾಗು ಹಿಂದಿ ಬೆಳವಣಿಗೆಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕೊಡುಗೆ ಅಪಾರ. ಮುಂದಿನ ದಿನಮಾನಗಳಲ್ಲಿ ಇನ್ನು ಸಂಸ್ಥೆ ವಿದ್ಯಾರ್ಥಿಗಳಿಗೆ ಹಲವಾರು ಯೋಜನೆ ರೂಪಿಸಿದ್ದು ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಭಾರತದ ವೈದ್ಯಕೀಯ ಪದ್ಧತಿಯ ಬಗ್ಗೆ ಸವಿಸ್ತಾರವಾಗಿ ನುಡಿದು ಆಯುರ್ವೇದ ಹಾಗೂ ಹೋಮಿಯೋಪಥಿ ಭಾರತದ ಅಸ್ಮಿತೆಯ ಭಾಗವಾಗಿವೆ.
ಗುಣವಾಗಲಾರದ ರೋಗಗಳು ಕೂಡ ಈ ಪದ್ಧತಿಯಿಂದ ರೋಗ ಗುಣವಾಗುವುದು. ಮಾತೃಭಾಷೆಯಲ್ಲಿ ಈ ಕಲಿಕಾ ವಿಧಾನಗಳನ್ನು ಬದಲಿಸಬೇಕಾಗಿದೆ ಹಾಗೂ ಮಾತೃಭಾಷೆಯಲ್ಲಿ ಪಠನ ಅಧ್ಯಯನ ಮಾಡುವದು ತುಂಬಾ ಅವಶ್ಯಕವೆಂದು ನುಡಿದು ಪ್ರಶಸ್ತಿ ಪಡೆದ ಸಮಸ್ತ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಮುಖ್ಯ ಅತಿಥಿಗಳು ಕರ್ನಾಟಕ ರಾಜ್ಯಪಾಲರು ತಾವರಚಂದ ಗೆಹ್ಲೊಟ ಅವರು ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ಸಾಮಾನ್ಯ ಜನರ ಏಳ್ಗೆ ಬಗ್ಗೆ ಶ್ರಮಿಸಬೇಕು.
ಯಾವತ್ತೂ ಮಾತೃಭಾಷೆ ಕಲಿಕೆಗೆ ಒತ್ತು ನೀಡಬೇಕು ಹಾಗು ತಮಗೆಲ್ಲ ಮುಂಬರುವ ದಿನಮಾನಗಳಲ್ಲಿ ಒಳ್ಳೆಯದಾಗಲೆಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ದಕ್ಷಿಣ ಭಾರತಹಿಂದಿ ಪ್ರಚಾರ ಅಧ್ಯಕ್ಷರಾದ ಈರೇಶ ಅಂಚಟಗೇರಿ, ಶ್ರೀ ಅರುಣ ಜೋಶಿ, ಶ್ರೀ ಎಂ ಆರ ಪಾಟೀಲ ಡಾ ಎಸ ಬಿ ಹಿಂಚಿಗೇರಿ ಡಾ ರಾಧಾಕೃಷ್ಣನ್. ಡಾ ಹೊಂಬಳ ಡಾ ವೈಷ್ಣವಿ. ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು.