ಸ್ಥಳೀಯ ಸುದ್ದಿ

ದುಸ್ಥಿತಿಯಲ್ಲಿರುವ ಶೌಚಾಲಯಗಳ ಪರಿಶೀಲನೆ ಮಾಡಿದ ಮೇಯರ್

ಧಾರವಾಡ

ಮೇಯರ್ ಎಂದ್ರೆ ಜನಸಾಮಾನ್ಯರ ಜನಸೇವಕನೆಂದು ತೋರಿಸಿಕೊಡುತ್ತಿದ್ದಾರೆ ನಮ್ಮ ಧಾರವಾಡ ಮೇಯರ್ ಈರೇಶ ಅಂಚಟಗೇರಿ ಅವರು.

ಕಾಮನ್ ಮ್ಯಾನ್ ಸಿಎಂ ಎಂದೇ ಹೆಸರು ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಮಾದರಿಯಲ್ಲೇ ಡೌನ ಟು ಅರ್ಥ ಆಗಿರುವ ಮೇಯರ್ ಅಂಚಟಗೇರಿ ಅವರು ಜನಸಾಮಾನ್ಯರ ಸಮಸ್ಯೆಗಳನ್ನು ನೋಡಿಕೊಳ್ಳಲು ವಾರ್ಡಗಳಿಗೆ ತೆರಳಿ ಪರಿಶೀಲನೆ ಮಾಡುತ್ತಿದ್ದಾರೆ.

ಇಂದು ಧಾರವಾಡದ 8 ನೇ ವಾರ್ಡಿನ ಹೆಬ್ಬಳ್ಳಿ ಅಗಸಿಯಲ್ಲಿರುವ ಮಹಾನಗರ ಪಾಲಿಕೆಯ ಸಾರ್ವಜನಿಕ ಶೌಚಾಲಯವನ್ನು ಮಹಾನಗರ ಪಾಲಿಕೆಯ ಮಾನ್ಯ ಮಹಾಪೌರ ಈರೇಶ ಅಂಚಟಗೇರಿ ರವರು ವೀಕ್ಷಿಸಿದರು.

ದುಸ್ಥಿತಿಯಲ್ಲಿರುವ ಈ ಶೌಚಾಲಯವನ್ನು ಶೀಘ್ರವೇ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಸದುಪಯೋಗವಾಗುವ ರೀತಿ ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ರು.

ಪಾಲಿಕೆಯ ಸದಸ್ಯರಾದ ಶ್ರೀ ಶಂಕರ ಶಿಳಕೆ ರವರು, ಹಾಗೂ ಶ್ರೀಮತಿ ರತ್ನಾಬಾಯಿ ನಾಝರೆ ರವರು ಕೂಡ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮೇಯರ್ ಅವರಿಗೆ ಮನವಿ ಸಲ್ಲಿಸಿದ್ರು.

Related Articles

Leave a Reply

Your email address will not be published. Required fields are marked *