ಸ್ಥಳೀಯ ಸುದ್ದಿ

ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ‌ ನಿಲ್ತಾರಾ ತವನಪ್ಪ ಅಷ್ಟಗಿ

ಧಾರವಾಡ

ಹೌದು ಇಂತಹದೊಂದು ಕುತೂಹಲ ಇದೀಗ ಧಾರವಾಡ ರಾಜಕೀಯ ವಲಯದಲ್ಲಿ ಮೂಡಿದೆ.

ತವನಪ್ಪ ಅಷ್ಟಗಿ ಅವರು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಇದೀಗ ದೊಡ್ಡಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ಬಹುತೇಕ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಇವರಿಗೆ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ್ ಸಾಥ್ ನೀಡಿದ್ದಾರೆ.

ಇತ್ತೀಚಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಪಕ್ಷಕ್ಕೆ ರಾಜಿನಾಮೆ ಕೊಟ್ಟಿರುವ ಅಷ್ಟಗಿ ಅವರು ಹಾಲಿ ಶಾಸಕರ ವಿರುದ್ಧ ಬಂಡಾಯ ಸಾರಿದ್ದು, ಅವರ ಆಡಳಿತ ವಿರೋಧಿ ಅಲೆ‌ ಬಗ್ಗೆ ಜನರಿಗೆ ಮನವರಿಕೆ ‌ಮಾಡಿಕೊಡುತ್ತಿದ್ದಾರೆ.

ಅಮ್ಮಿನಭಾವಿ ರಸ್ತೆಯಲ್ಲಿರುವ ತಮ್ಮ ಒಡೆತನದ ಫ್ಯಾಕ್ಟರಿಯಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸಿದ ಅಷ್ಟಗಿ ಧಾರವಾಡ ಗ್ರಾಮೀಣ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಹತ್ವದ ಪಾತ್ರ ನಿಭಾಯಿಸುವುದಂತು ಸುಳ್ಳಲ್ಲಾ.

Related Articles

Leave a Reply

Your email address will not be published. Required fields are marked *

Back to top button