ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಸವರಾಜ ಕೊರವರ್ ಹವಾ
ಧಾರವಾಡ
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಸವರಾಜ ಕೊರವರ್ ಒಂದು ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು ಹೊಂದಿರುವ ಬಸವರಾಜ ಕೊರವರ್ ಬಸಣ್ಣಾ ಅಂತಾನೇ ಫೇಮಸ್ ಆಗಿದ್ದಾರೆ.
ಸ್ವಾಮೀ ವಿವೇಕಾನಂದರ 160 ನೇ ಜಯಂತಿ ಹಾಗೂ ಸುಭಾಷಚಂದ್ರ ಬೋಸ್ ಅವರ 126 ನೇ ಜಯಂತ್ಯೋತ್ಸವ ಹಿನ್ನೆಲೆಯಲ್ಲಿ ಅರ್ಥಪೂರ್ಣವಾಗಿ ದೊಡ್ಡನಾಯಕನ ಕೊಪ್ಪದಲ್ಲಿ ಬಸವರಾಜ ಕೊರವರ್ ಕಾರ್ಯಕ್ರಮ ಆಯೋಜನೆ ಮಾಡಿದ್ದರು.
ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ ಸೇರಿದಂತೆ
ಬಸವರಾಜ ಮಹಾಮನಿ ಹಾಗೂ ನರಸಿಂಹಜೋಶಿ
ಕಲಾವಿದರನ್ನು ಕರೆಯಿಸಿ ಕಾರ್ಯಕ್ರಮ ನಡೆಸಿದ್ರು.
ಇದೇ ವೇಳೆ ಜನಜಾಗೃತಿ ಸಂಘದ ಸುಮಾರು15 ಕ್ಕೂಹೆಚ್ಚು ಗ್ರಾಮ ಘಟಕಗಳನ್ನು ಉದ್ಘಾಟನೆ ಮಾಡಲಾಯಿತು.
ಗ್ರಾಮೀಣ ಭಾಗದಲ್ಲಿ ಜನರೊಂದಿಗೆ ಹತ್ತಿರವಾಗಿರುವ ಬಸವರಾಜ ಕೊರವರ್ ಗ್ರಾಮೀಣ ಭಾಗದ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಲು ತಯಾರಿ ನಡೆಸಿದ್ದು, ಇವರ ಬೆಂಬಲಕ್ಕೆ ಲಕ್ಷಾಂತರ ಮಂದಿ ಪ್ರೋತ್ಸಾಹ ಕೊಡ್ತಾಇದ್ದು, ಅಭೂತಪೂರ್ವ ಜನ್ನಮನ್ನಣೆ ಪಡೆದು ಜನನಾಯಕರಾಗುತ್ತಿದ್ದಾರೆ..