ಧಾರವಾಡ ಜಿಲ್ಲೆಯಲ್ಲಿ ಸೋಯಾಬಿನ್ ಬೆಳೆಯಲು ಉತ್ಸುಕರಾದ ರೈತರು..
ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ನಿಗದಿಗಿಂತ ಮುಂಚೆಯೇ ಮುಂಗಾರು ಮಳೆ ಆಗಮಿಸಿದ್ದರ ಪರಿಣಾಮ ಜಿಲ್ಲೆಯಲ್ಲಿ ಎಲ್ಲೇಡೆ ಮಳೆಯಾಗಿದೆ. ಹೀಗಾಗಿ ರೈತಾಪಿ ವರ್ಗದವರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕೃಷಿ ಇಲಾಖೆ ರೈತರಿಗೆ ಬೀಜಗಳ ಪೂರೈಕೆಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಅತಿ ಹೆಚ್ಚು ಇಳುವರಿ ಹಾಗೂ ಲಾಭದಾಯಕ ಬೆಳೆಯಾಗಿರುವ ಸೊಯಾಬಿನ್ ಬೆಳೆಯಲು ಧಾರವಾಡ ಜಿಲ್ಲೆಯಲ್ಲಿ ರೈತರು ಮುಂದಾಗಿದ್ದಾರೆ.
ಹೀಗೆ ರೈತರಿಗೆ ಮಾಹಿತಿ ಕೊಡುವಂತಹ ಕೆಲಸವನ್ನು ಪವರ್ ಸಿಟಿ ನ್ಯೂಸ್ ತಂಡ ಮಾಡುತ್ತಿದೆ.
ಜಿಲ್ಲೆಯಲ್ಲಿ ತಾಲೂಕುವಾರು ಬಿತ್ತನೆ ದಾಸ್ತಾನು ಕ್ವಿಂಟಾಲ್ಗಳಲ್ಲಿ ನೋಡುತ್ತಾ ಹೋದ್ರೆ, ಧಾರವಾಡ ತಾಲೂಕಿನಲ್ಲಿ 9950 ಸೊಯಾಬಿನ್ ದಾಸ್ತಾನು ಇದ್ದರೆ, ಹುಬ್ಬಳ್ಳಿಯಲ್ಲಿ 4100 ಕ್ವಿಂಟಾಲ್ ದಾಸ್ತಾನು ಇದೆ. ಕಲಘಟಗಿ ತಾಲೂಕಿನಲ್ಲಿ 4400 ಕ್ವಿಂಟಾಲ್ ಇದ್ದು, ಕುಂದಗೋಳ ತಾಲೂಕಿನಲ್ಲಿ 1200 ಕ್ವಿಂಟಾಲ್ ಹಾಗೂ ನವಲಗುಂದ ತಾಲೂಕಿನಲ್ಲಿ ಯಾವುದೇ ದಾಸ್ತಾನು ಇಲ್ಲಾ. ಒಟ್ಟು ಜಿಲ್ಲೆಯಲ್ಲಿ 19650 ಕ್ವಿಂಟಾಲ್ ಸೊಯಾಬಿನ್ ದಾಸ್ತಾನಿನಲ್ಲಿ 3206.08 ಕ್ವಿಂಟಾಲ್ ಮಾರಾಟವಾಗಿದೆ.
ಅದೇ ರೀತಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು, ಹೆಸರು 874 ಕ್ವಿಂಟಾಲ್ ದಾಸ್ತುನು ಇದ್ದು, ಅದರಲ್ಲಿ 438.23 ಕ್ವಿಂಟಾಲ್ ಮಾರಾಟವಾಗಿದೆ. ಉದ್ದು 186 ಕ್ವಿಂಟಾಲ್ ದಾಸ್ತುನು ಇದ್ದು, 58.20 ಕ್ವಿಂಟಾಲ್ ಮಾರಾಟವಾಗಿದೆ. ಅಲಸಂದಿ 2 ಕ್ವಿಂಟಾಲ್ ದಾಸ್ತು ಇದೆ. ತೊಗರಿ 68 ಕ್ವಿಂಟಾಲ್ ದಾಸ್ತಾನು ಇದ್ದು, ಅದರಲ್ಲಿ 0.95 ಕ್ವಿಂಟಾಲ್ ಮಾರಾಟವಾಗಿದೆ. ಜೋಳ ದಾಸ್ತಾನು 0.5 ಇದೆ. ಶೇಂಗಾ 1236 ಕ್ವಿಂಟಾಲ್ ದಾಸ್ತಾನು ಇದ್ದು, 164.10 ಕ್ವಿಂಟಾಲ್ ಮಾರಾಟವಾಗಿದೆ. ಮೆಕ್ಕೆಜೋಳ 2417 ಕ್ವಿಂಟಾಲ್ ದಾಸ್ತಾನು ಇದ್ದು, 49.44 ಮಾರಾಟವಾಗಿದೆ. ಭತ್ತ 185 ಕ್ವಿಂಟಾಲ್ ದಾಸ್ತಾನು ಇದ್ದು, 51.38 ಕ್ವಿಂಟಾಲ್ ಮಾರಾಟವಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 5 ತಾಲೂಕಿನಲ್ಲಿ ಒಟ್ಟು 3998.16 ಕ್ವಿಂಟಾಲ್ ಬೀಜಗಳು ಮಾರಾಟವಾಗಿದೆ.
ಜಿಲ್ಲೆಯಲ್ಲಿ ಅಲಸಂದಿ, ಜೋಶ, ಶೇಂಗಾ, ಉದ್ದು, ಹಾಗೂ ತೊಗರಿ ಬೀಜಗಳ ಮಾರಾಟದಲ್ಲಿ ಅಷ್ಟೊಂದು ವ್ಯತ್ಯಾಸ ಕಂಡು ಬಂದಿಲ್ಲಾ. ಜಿಲ್ಲೆಯಲ್ಲಿ ಅತಿ ಹೆಚ್ಚು ಸೊಯಾಬಿನ್ ಬೀಜಗಳಿಗೆ ಬೇಡಿಕೆ ಹೆಚ್ಚಿದೆ.ಇದಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆ ಕೂಡ ಬೀಜಗಳನ್ನು ರೈತರಿಗೆ ಸಮರ್ಪಕವಾಗಿ ಪೂರೈಸುವ ಕೆಲಸವನ್ನು ಮಾಡುತ್ತಿದೆ.
ಪವರ ಸಿಟಿ ನ್ಯೂಸ್ ಕನ್ನಡ ಸತ್ಯ ಸದಾಕಾಲ