ಸ್ಥಳೀಯ ಸುದ್ದಿ

ಧಾರವಾಡ ಮೂಲದ ಅನಿವಾಸಿ ಭಾರತೀಯನ ಮೆಚ್ಚುಗೆ ಕೆಲಸ

ಧಾರವಾಡ

ಅಮೇರಿಕಾದ ಅನಿವಾಸಿ ಭಾರತೀಯರು, ನಮ್ಮ ಧಾರವಾಡದವರು, ಖ್ಯಾತ ಉದ್ದಿಮೆದಾರರಾದ ಆದ ಶ್ರೀ ರವಿ ಬೋಪಳಾಪುರ ರವರು, ತಮ್ಮ ಸ್ವಂತ ಖರ್ಚಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹುಬ್ಬಳ್ಳಿ ಭಾಗಕ್ಕೆ 2, ಹಾಗೂ ಧಾರವಾಡ ಭಾಗಕ್ಕೆ 1 ಅಂತಿಮ ಶವಯಾತ್ತೆಯ ವಾಹನಗಳನ್ನು ದೇಣಿಗೆ ಕೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ, ಇಂದು ಅವರ ಸಹಯೋಗಿಗಳಾದ ಶ್ರೀ ಸಂತೋಷ ಶೆಟ್ಟಿ ರವರೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಮಹಾನಗರ ಪಾಲಿಕೆಯ ಮಹಾಪೌರರು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.

ಈಗಾಗಲೇ ಟಾಟಾ ಕಂಪನಿಯ ಅಭಿಯಂತರರೊಂದಿಗೆ ಚರ್ಚಿಸಿ, ಅವಳಿನಗರದ ನಾಗರಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಎಲ್ಲಾ ಮೂಲಭೂತ ಸೌಕರ್ಯಗಳುಳ್ಳ ಶವ ವಾಹನಗಳನ್ನು ತಯಾರಿಸುವ ಬಗ್ಗೆ ಮಹಾಪೌರರು ಸೂಚನೆ ನೀಡಿದರು.

ಕೇವಲ 500 ರೂಪಾಯಿಗಳ ವೆಚ್ಚದಲ್ಲಿ ಅವಳಿನಗರದ ನಾಗರಿಕರಿಗೆ ಸೇವೆಯನ್ನು ನೀಡುವ ಶವ ವಾಹನಗಳನ್ನು ಅತೀ ಶೀಘ್ರದಲ್ಲಿ ಮಹಾನಗರ ಪಾಲಿಕೆಗೆ ನೀಡಲಾಗುವುದು.

ಅನೇಕ ವರ್ಷಗಳಿಂದ ಅವಳಿನಗರದಲ್ಲಿ ಶವಯಾತ್ರೆಗಾಗಿ ಖಾಸಗಿ ವಾಹನಗಳ ಬಳಕೆಯಾಗುತ್ತಿದ್ದು, ಸಾರ್ವಜನಿಕರಿಂದ 4000 ದಿಂದ 5000 ಗಳನ್ನು ಭರಿಸಿಕೊಳ್ಳುತ್ತಿದ್ದು, ಅನೇಕ ಬಡವರಿಗೆ ತೊಂದರೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರ ಕೋರಿಕೆಯ ಮೇರೆಗೆ ಉಚಿತ ಶವ ಯಾತ್ರೆ ವಾಹನಗಳನ್ನು ಪಾಲಿಕೆಗೆ ನೀಡಿದ ಶ್ರೀ ರವಿ ಭೋಪಳಾಪುರ ರವರಿಗೆ ಅವಳಿನಗರದ ಜನತೆಯ ಪರವಾಗಿ ಮೇಯರ್ ಈರೇಶ ಅಂಚಟಗೇರಿ ಅಭಿನಂದನೆ ಸಲ್ಲಿಸಿದ್ರು.

Related Articles

Leave a Reply

Your email address will not be published. Required fields are marked *

Back to top button