ಸ್ಥಳೀಯ ಸುದ್ದಿ

ನನ್ನ ಪತಿ ಯಾರಿಗೂ ಅನ್ಯಾಯ ಮಾಡಿಲ್ಲಾ- ಶೀವಲೀಲಾ ಕುಲಕರ್ಣಿ

ಧಾರವಾಡ

ಧಾರವಾಡ 71 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ,ಬೂತ ಕಾರ್ಯಕರ್ತರು,ಪದಾಧಿಕಾರಿಗಳು ಹಾಗೂ ಅಭಿಮಾನಿಗಳ ಸಭೆ ಕರೆಯಲಾಗಿತ್ತು.

ಈ ಸಂಧರ್ಭದಲ್ಲಿ ಮಾತನಾಡಿದ ಶ್ರೀಮತಿ ಶಿವಲೀಲಾ ಕುಲಕರ್ಣಿ ಅವರು ಮಾತನಾಡಿ, ಧಾರವಾಡ ಕಂಡ ಅಭಿವೃದ್ದಿಯ ಹರಿಕಾರ ವಿನಯ ಕುಲಕರ್ಣಿಯವರು ನಮ್ಮ ಹೊಲ ನಮ್ಮ ರಸ್ತೆ,ದೇವಸ್ಥಾನಗಳ ಜೀರ್ಣೋದ್ಧಾರ, ಕೃಷಿ ಹೊಂಡಗಳು ಹೀಗೆ ಹತ್ತು ಹಲವಾರು ಅಭಿವೃಧ್ಧಿ ಕಾರ್ಯ ಕೈಗೊಂಡು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದು,ಅವರು ಮಾಡಿದ ಕೆಲಸ ಕಾರ್ಯಗಳನ್ನು ಮನೆಮನೆಗೆ ತಲುಪಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಸರ್ಕಾರ ಬಡವರ ಬೆನ್ನ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದು ಸಿಲೆಂಡರ,ದಿನಬಳಕೆಯ ವಸ್ತುಗಳು ಗಗನಕ್ಕೇರಿದ್ದು,ಕೇವಲ ತಮ್ಮ ಸ್ವ ಹಿತಾಸಕ್ತಿಗೆ ಬೆಲೆ ಕೊಡುವ ಅವರು ಬಡವರ ಗೋಳಿಗೆ ಕ್ಯಾರೇ ಎನ್ನುತ್ತಿಲ್ಲ,ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಕೂಡಿ ಕಾಂಗ್ರೆಸಗೆ ಮತ ಹಾಕುವದರ ಮೂಲಕ ಬಡವರ ವಿರೋಧಿ ಸರ್ಕಾರವನ್ನು ಕಿತ್ತೊಗೆಯಬೇಕು ಹಾಗೂ ಜನಪರ ಆಡಳಿತ ನೀಡುವ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಹೇಳಿದರು.

ಈ ಸಂಧರ್ಭದಲ್ಲಿ,ವೈಶಾಲಿ ಕುಲಕರ್ಣಿ,ಅಧ್ಯಕ್ಷರಾದ ಈಶ್ವರ ಶಿವಳ್ಳಿ,ಮುಖಂಡರುಗಳಾದ ಬಸವರಾಜು ಬನವನ್ನವರ್ ತೀರ್ಕಪ್ಪ ಆಯತ್ತಿ ಬಸವರಾಜ್ ವೆಂಕಟಾಪುರ ಮೈಲಾರ ಗೌಡ ಪಾಟೀಲ್ ಆತ್ಮಾನಂದ ಅಂಗಡಿ ಕರಿಯಪ್ಪ ಮಾದರ್ ಖಾದರ್ ಸಾಬ್ ಬೂಕಿಟಗಾರ ಹವಳೆಪ್ಪ ಹುಂಬೇರಿ ಶಿವಕುಮಾರ್ ದೇಸಾಯಿ ಸೇರಿದಂತೆ ನೂರಾರು ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button