ಸ್ಥಳೀಯ ಸುದ್ದಿ

ನಯಾನಗರದಲ್ಲಿ ನವಗ್ರಹ ದ್ವಾರಕ್ಕಿದೆ ಅದರದೇ ಮಹಿಮೆ-ವಿಶೇಷತೆ.

ಬೆಂಗಳೂರು

ಬೆಳಗಾವಿ ಜಿಲ್ಲೆಯಲ್ಲಿರುವ ಬೈಲಹೊಂಗಲ ತಾಲೂಕಿನ ನಯಾನಗರ ಸುಕ್ಷೇತ್ರದ ಮಠಕ್ಕೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.

ಮಠದಲ್ಲಿ ಇರುವ ನವಗ್ರಹ ದ್ವಾರ ಬಹಳಷ್ಟು ವಿಶೇಷತೆ ಹೊಂದಿದ್ದು, ಇದರ ದರ್ಶನದ ಜೋತೆಗೆ ಈ ದ್ವಾರದ ಒಳಗಡೆ ಹಾಯ್ದು ಹೋದ್ರೆ ದುಷ್ಟಶಕ್ತಿಯ ನೆರಳು ನಮ್ಮಿಂದ ದೂರವಾಗುತ್ತೆ ಎನ್ನುವ ನಂಬಿಕೆಯೂ ಬಲವಾಗಿದೆ.

ಬೆಳ್ಳಿಗ್ಗೆ 4.30 ರಿಂದ 5.30 ವರೆಗೆ ಮಠಕ್ಕೆ ಬಂದಿರುವ ಸಾವಿರಾರು ಭಕ್ತರು, ನಿತ್ಯವೂ ನವಗ್ರಹ ದ್ವಾರದ ಮೂಲಕ ದಾಟಿ ಶ್ರೀಗಳ ಆರ್ಶೀವಾದ ಪಡೆಯುತ್ತಾರೆ.

ಬೆಳಿಗ್ಗೆ ಮಠದಲ್ಲಿ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ ಸಮ್ಮುಖದಲ್ಲಿ ವಿಶೇಷ ಪೂಜೆ ನಡೆಯುತ್ತದೆ.‌

ಶ್ರೀಗಳ ದರ್ಶನ ಪಡೆಯಲು ಶ್ರಾವಣ ಮಾಸದಲ್ಲಿ ‌ನಿತ್ಯವೂ ಸಾವಿರಾರು ಮಂದಿ‌ ಭಕ್ತರ ದಂಡು ಬೈಲಹೊಂಗಲ ತಾಲೂಕಿನ ನಯಾನಗರ ಸುಕ್ಷೇತ್ರದ ಶ್ರೀ ಸುಖದೇವಾನಂದ ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಹಾಗೂ ಮಠದಲ್ಲಿರುವ ಗದ್ದುಗೆ ದರ್ಶನ ಪಡೆಯುತ್ತಿದ್ದಾರೆ.

ಇಂತಹ ಐತಿಹಾಸಿಕ ಮಠ ಸರ್ವಧರ್ಮ ಸಮಬಾಳು ಸಮಪಾಲು ಎನ್ನುವ ಭಾವೈಕ್ಯತೆಯನ್ನು ಸಾರುತ್ತಿದೆ.

Related Articles

Leave a Reply

Your email address will not be published. Required fields are marked *

Back to top button