ಸ್ಥಳೀಯ ಸುದ್ದಿ

ನರೇಗಾ ಯೋಜನೆಯ ಕಾಮಗಾರಿ ವೀಕ್ಷಣೆ ಮಾಡಿದ ಜಿ.ಪಂ.ಸಿಇಒ

ಗಜೇಂದ್ರಗಡ: ತಾಲೂಕಿನಲ್ಲಿ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಸೋಮವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ ಭೇಟಿ ನೀಡಿ ಪರಿಶೀಲಿಸಿದರು.

ತಾಲೂಕಿನ ನಿಡಗುಂದಿ ಗ್ರಾಮದ ಶಾಲಾ ಕಂಪೌಂಡ, ಆಟದ ಮೈದಾನ, ಗೋಗೇರಿ ಗ್ರಾಮ ಪಂಚಾಯತಿಯ ಮಾಟರಂಗಿ ಗ್ರಾಮ ಕೆರೆ ಅಭಿವೃದ್ಧಿ ಕಾಮಗಾರಿ, ರಾಂಪೂರು ಪಂಚಾಯತಿಯ ಪುರ್ತಗೇರಿ ಗ್ರಾಮದ ಶಾಲೆಯ ಮೈದಾನ ಅಭಿವೃದ್ಧಿ ಪಡಿಸಿರುವ ಕಾಮಗಾರಿಗಳಿಗೆ ವೀಕ್ಷಣೆ ಮಾಡಿ ಸ್ಥಳದಲ್ಲಿಯೇ ಪೈಲ್ ಗಳನ್ನು ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕಾಧಿಕಾರಿಗಳಾದ ಬಸವರಾಜ ಬಡಿಗೇರ್ ಪಿಡಿಒ ಅಮರೇಶ ಮೂಲಿಮನಿ, ಶರಣಪ್ಪ ನರೇಗಲ್, ಎಸ್.ಬಿ. ಕಡಬಲಕಟ್ಟಿ, ತಾಂತ್ರಿಕ ಸಂಯೋಜಕರಾದ ಪ್ರೀಯಾಂಕಾ ಅಂಗಡಿ, ಐಇಸಿ ಸಂಯೋಜಕರಾದ ಮಂಜುನಾಥ ಹಳ್ಳದ, ತಾಂತ್ರಿಕ ಸಹಾಯಕರಾದ ನವೀನ್ ಬಸರಿ, ಪ್ರವೀಣ ದೂಳಣ್ಣನವರ, ಬಿಎಫ್ಟಿ ಚಂದ್ರಕಾಂತ ಲಮಾಣಿ, ರವಿ ಹೊಂಬಳ, ಗ್ರಾಮ ಕಾಯಕ ಮಿತ್ರರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button