ಸ್ಥಳೀಯ ಸುದ್ದಿ

ನವಲಗುಂದ ತಾಲೂಕಿನ ಮನೆ ಮಗಳು ತ್ರೀಪುರಾ ರಾಜ್ಯದಲ್ಲಿ ಜಿಲ್ಲಾಧಿಕಾರಿ

ಬೆಂಗಳೂರು

ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಶಲವಡಿ ಸೇಠಜಿ ಎಂದೇ ಹೆಸರಾದ ಪಾರಸಮಲ್ ಜೈನ್ ಮನೆತನದಲ್ಲಿ ಹುಟ್ಟಿದ ಮಗಳು ಇಂದು ತ್ರೀಪೂರಾ ರಾಜ್ಯದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಅವರೇ ಕುಮಾರಿ ಮೇಘನಾ ಜೈನ್ . ಇವರು ಐಎಎಸ್ ಅಧಿಕಾರಿಯಾಗಿ ಸೆಪ್ಟೆಂಬರ್ 3 ರಂದು ಅಥರ್ಗಾ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಇವರ ತಂದೆ ಅವರು, ಮನೋಜ ಜೈನ್, ನವಲಗುಂದ ನಗರದಲ್ಲಿ ವ್ಯಾಪರ ಮಾಡುತ್ತಾ ಮಗಳು ಮೇಘನಾಳಿಗೆ ಒಳ್ಳೆಯ ಶಿಕ್ಷಣ ನೀಡಿದ್ದು #IAS ಅಧಿಕಾರಿಯಾಗುವಂತೆ ಮಾಡಿದ್ದಾರೆ.

ನವಲಗುಂದ ತಾಲೂಕಿನ ರೈತ ಬಂಡಾಯದ ಗಂಡು ಮೆಟ್ಟಿದ ನಾಡಿನ ಕೀರ್ತಿ ಹೆಚ್ಚಿಸಿದ ಕುಮಾರಿ ಮೇಘನಾ ಮನೋಜ್ ಜೈನ ಅವರಿಗೆ ಕ್ಷೇತ್ರದ ಜನತೆಯ ವತಿಯಿಂದ ಮುಖ್ಯಮಂತ್ರಿಗಳ ಮಾಜಿ ರಾಜಕೀಯ ಕಾರ್ಯದರ್ಶಿ ಹಾಗೂ ನವಲಗುಂದ ಮಾಜಿ ಶಾಸಕರಾದ ಶ್ರೀ ಎನ್.ಹೆಚ್. ಕೋನರಡ್ಡಿ ಅವರು ಶುಭಾಷಯ ಕೋರಿದ್ದಾರೆ.

ಇದೇ ರೀತಿ ನನ್ನ ಕ್ಷೇತ್ರದ ವಿದ್ಯಾರ್ಥಿಗಳು #IAS #IPS #KAS ಅಧಿಕಾರಿಗಳಾಗಿ ಕ್ಷೇತ್ರದ ಗೌರವವನ್ನು ಹೆಚ್ಚಿಸಲು ಯುವಕರಿಗೆ ಮೇಘನಾ ಅವರು ಮಾದರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button