ಸ್ಥಳೀಯ ಸುದ್ದಿ

ನಾಮಪತ್ರ ಹಿಂಪಡೆದು ಬಿಜೆಪಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಬಸವರಾಜ ಕೊರವರ್

ಧಾರವಾಡ

ಜನಜಾಗೃತಿ ಸಂಘದ ಅಧ್ಯಕ್ಷರು ಹಾಗೂ ಧಾರವಾಡ 71 ನೇ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ಬಸವರಾಜ ಕೊರವರ ಇಂದು ನಾಮಪತ್ರ ಹಿಂಪಡೆದು, ಬಿಜೆಪಿ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ರು.

ಇಂದು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ನಾಮಪತ್ರವನ್ನು ಹಿಂಪಡೆಯುವ ಬಗ್ಗೆ ಅವರ ಮನವೊಲಿಸಿದರು.

ಇದೇ ಸಂದರ್ಭದಲ್ಲಿ ಕೆಲ ದಿನಗಳಿಂದ ಮನಸ್ತಾಪದಿಂದ ಅಗಲಿದ ಹಳೆಯ ಸ್ನೇಹಿತರಾದ ಹಾಲಿ ಶಾಸಕ ಅಮೃತ ದೇಸಾಯಿ ಹಾಗೂ ಬಸವರಾಜ ಕೊರವರ ರವರನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒಂದುಗೂಡಿಸಿದ್ರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಸಹ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯರಾದ ಕಮತಿ ರವರು, ಜಯತೀರ್ಥ ಕಟ್ಟಿ ರವರು,ನಾಗರಾಜ ಕಿರಣಗಿ ರವರು, ನೀರಲಗಿ ರವರು, ಗುರುನಾಥ ಗೌಡರ ರವರು, ಉಮೇಶ ಜೋಷಿ ರವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button