ಸ್ಥಳೀಯ ಸುದ್ದಿ
ನಾಳೆ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆಗೆ ವಿನಯ ಕುಲಕರ್ಣಿ ಕುಟುಂಬ ತಯಾರಿ
ಧಾರವಾಡ
ನಾಳೆ ಮಾಜಿಸಚಿವ ವಿನಯ ಕುಲಕರ್ಣಿ ಅವರ ಗೈರು ಹಾಜರಿಯಲ್ಲಿ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲು ಕುಟುಂಬ ವರ್ಗ ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ ಅವರನ್ನು ಭೇಟಿ ಆಹ್ವಾನ ಮಾಡಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರವರನ್ನು ಅವರ ಸ್ವ ಗೃಹದಲ್ಲಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು ಭೇಟಿ ಮಾಡಿ ಹೂಗುಚ್ಚ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದಕ್ಕೆ ಅಭಿನಂದಿಸಿದರು.ಅಲ್ಲದೇ ನಾಳೆ ನಾಮಪತ್ರ ಸಲ್ಲಿಕೆಗೂ ಆಗಮಿಸುವಂತೆ ಮನವಿ ಮಾಡಿದ್ರು.
ಈ ಸಂದರ್ಭದಲ್ಲಿ, ಬ್ಲಾಕ ಅಧ್ಯಕ್ಷರುಗಳಾದ ಅರವಿಂದ ಏಗನಗೌಡರ,ಈಶ್ವರ ಶಿವಳ್ಳಿ,ಹಾಗೂ ಶ್ರೀ ವಿನಯ ಕುಲಕರ್ಣಿಯವರ ಸುಪುತ್ರಿ ವೈಶಾಲಿ ಕುಲಕರ್ಣಿ,ಹೇಮಂತ ಕುಲಕರ್ಣಿ ಮಾಜಿ ಜಿಲ್ಲಾಪಂಚಾಯತಿ ಸದಸ್ಯರಾದ ಕಲ್ಲಪ್ಪ ಪುಡಕಲಕಟ್ಟಿ,ಚನಬಸಪ್ಪ ಮಟ್ಟಿ,ಅಶೋಕ ಸೂರ್ಯವಂಶಿ,ಆಸೀಫ ಸನದಿ ಮುಂತಾದವರು ಉಪಸ್ಥಿತರಿದ್ದರು.