ಸ್ಥಳೀಯ ಸುದ್ದಿ
ನಿಮ್ಮ ಮತದ ಮೂಲಕ ನನ್ನ ಊಡಿ ತುಂಬಿ ಎಂದ ಶಿವಲೀಲಾ ಕುಲಕರ್ಣಿ
ಧಾರವಾಡ
ಮಾಜಿ ಸಚಿವ ವಿನಯ ಕುಲಕರ್ಣಿ ಕ್ಷೇತ್ರದಿಂದ 3 ವರ್ಷಗಳ ಕಾಲ ದೂರ ಇದ್ದು, ಈ ಬಾರಿ ಚುನಾವಣೆಗೆ ಅವರಿಲ್ಲದೇ ಗೈರು ಹಾಜರಿಯಲ್ಲಿ ಅವರ ಕುಟುಂಬ ವರ್ಗ ಚುನಾವಣೆ ಎದುರಿಸುತ್ತಿದೆ. ಹೀಗಾಗಿ ನಿಮ್ಮ ಮತಗಳ ಮೂಲಕ ನಮ್ಮ ಯಜಮಾನರನ್ನು ಆರಿಸಿ ತನ್ನಿ ಎಂದು ಮಾಜಿ ಸಚಿವರ ಪತ್ನಿ ಶೀವಲೀಲಾ ಕುಲಕರ್ಣಿ ಅವರು ಕಣ್ಣೀರು ಹಾಕಿದ್ರು.
ಇಂದು ವಿನಯ ಕುಲಕರ್ಣಿ ಅವರ ನಾಮಪತ್ರ ಸಲ್ಲಿಸಲು ಆಗಮಿಸಿದ್ದ ವೇಳೆ ಶೀವಲೀಲಾ ಕುಲಕರ್ಣಿ ಅವರು ಈ ರೀತಿ ಭಾವುಕರಾದ್ರು.
ಇದೇ ಸಂದರ್ಭದಲ್ಲಿ ವಿನಯ ಕುಲಕರ್ಣಿ ಅವರ ಮಗಳು ಕೂಡ ನಮ್ಮ ತಂದೆ ಮನೆಗೆ ಬಾರದೇ ಇದ್ದು, 3 ವರ್ಷವಾಯಿತು. ನಿವೆಲ್ಲಾ ನಮ್ಮ ಜೊತೆಗೆ ಇದ್ದೀರಿ. ನಾವು ನಿಮ್ಮ ಜೋತೆಗೆ ಇರ್ತೇವಿ ನಮ್ಮ ಅಪ್ಪನನ್ನು ಈ ಬಾರಿಆಯ್ಕೆ ಮಾಡಿ ಎಂದು ಬೇಡಿಕೊಂಡರು.