ಧಾರವಾಡಸ್ಥಳೀಯ ಸುದ್ದಿ

ನೊಂದವರ ಪಾಲಿನ ಭರವಸೆಯ ಆಶಾಕಿರಣ ಈ ಯುಥ್ ಐಕಾನ್

ಒಂದು ರಾಷ್ಟ್ರೀಯ ಪ್ರಶಸ್ತಿ ಎಂಟು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ ಅದೃಶಪ್ಪ ಬಸಪ್ಪ ಸಲಕಿನಕೊಪ್ಪ.

ಧಾರವಾಡ ತಾಲ್ಲೂಕಿನ ಕುರುಬಗಟ್ಟಿ ಗ್ರಾಮದ ಸಾಮಾನ್ಯ ಮನೆತನದ ಅದೃಶ ಸಲಕಿನಕೊಪ್ಪ

ಸಮಾಜ ಸೇವೆ. ಹಾಸ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದವರು.
ಸೌಹಾರ್ದಯುತ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರನ್ನು ಜೊತೆಗೂಡಿಸಿಕೊಂಡು ನಡೆಯುವ ವ್ಯಕ್ತಿತ್ವ ಹೊಂದಿದ ಅದೃಶಪ್ಪ ಬಸಪ್ಪ ಸಲಕಿನಕೊಪ್ಪ(ಕುರುಬಗಟ್ಟಿ) ಇವರಿಗೆ ಸತತ ಐದು ವರ್ಷಗಳ ಕಾಲ ಮಾಡಿದ ಕಲಾ ಮತ್ತು ಸಮಾಜ ಸೇವೆ ಮತ್ತು ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಹೋದ ವರ್ಷ 2021ರಲ್ಲಿ ಒಂದು ರಾಷ್ಟ್ರೀಯ ಪ್ರಶಸ್ತಿ ಮತ್ತು ಆರು ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ಅತ್ಯಂತ ಹೆಮ್ಮೆಯ ವಿಷಯವಾಗಿದೆ.

  1. ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆಯು ಕೊಡಮಾಡಿದ ಸಂಗೋಳ್ಳಿ ರಾಯಣ್ಣ ಶೌರ್ಯ ಪ್ರಶಸ್ತಿ
  2. ಗಡಿನಾಡು ನುಡಿ ವಾರ ಪತ್ರಿಕೆ (ರಿ) ಬೆಳಗಾವಿ ಇವರು ಕೊಡಮಾಡುವ, “ಸಿರಿಗನ್ನಡ ರಾಷ್ಟ್ರೀಯ ಕಲಾ ಸೇವಾ ರತ್ನ
  3. ಸಪ್ತಸ್ವರ ಸಂಗೀತಕಲಾ ಬಳಗ (ರಿ) ಬೆಳಗಾಂವಿ ಮತ್ತು ಯಡಹಳ್ಳಿ ಕೆಂಚರಾಮನಹಾಳ ಮತ್ತು ಸಂಗ್ರೇಶಕೋಪ್ಪ ಇವರು ಕೊಡಮಾಡುವ” ಕರುನಾಡ ಯುವ ಸಾಮ್ರಾಟ್ ” ರಾಜ್ಯಪ್ರಶಸ್ತಿ “
  4. ಹೈಬ್ರೀಡ್ ನ್ಯೂಸ್ (ರಿ) ಬೆಂಗಳೂರು ಆಶ್ರಯದಲ್ಲಿ ಕೊಡಮಾಡುವ ನಮ್ಮ ಸ್ಟಾರ್ ರಾಜ್ಯಮಟ್ಟದ ಪ್ರಶಸ್ತಿ.
  5. ನವಿಲುಗರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ (ರಿ) ಧಾರವಾಡ ಇವರಿಂದ ರಾಜ್ಯೋತ್ಸವ ಪ್ರಶಸ್ತಿ ೨೦೨೧,
  6. ಕರ್ನಾಟಕ ರಕ್ಷಣಾ ವೇದಿಕೆ ಕಡಬಿ ಗ್ರಾಮದ ಸಹಯೋಗದಲ್ಲಿ .” ಕಲಾ ಸಿರಿ ” ರಾಜ್ಯ ಪ್ರಶಸ್ತಿ
  7. ಗಡಿನಾಡು ಕಲಾ ವೇದಿಕೆ ಕಾಸರಗೂಡು ಇವರು ಕೊಡಮಾಡುವ ” ಜೀವರಕ್ಷಕ” ರಾಜ್ಯ ಪ್ರಶಸ್ತಿಯು ಇವರಿಗೆ ಲಭಿಸಿದೆ.
  8. ಸಿದ್ಧಾರೂಢರ ಹಳೆ ವಿದ್ಯಾರ್ಥಿಗಳ ಸಂಘ ಕೊಡಮಾಡುವ ” ಶ್ರೀ ಸಿದ್ಧಾರೂಢ ಸಧ್ಬಾವನ ರಾಜ್ಯ ಪ್ರಶಸ್ತಿ.
  9. ಗಾನವಿ ಮೀಡಿಯಾ ಸೋರ್ಸ್ ಪ್ರೈವೇಟ್ ಲಿಮಿಟೆಡ್ ನ್ಯೂಸ್ 88 ಕನ್ನಡ ವಾಹಿನಿ ಕೊಡಮಾಡುವ ” ಸಾಧಕ ರತ್ನ ರಾಜ್ಯ ಪ್ರಶಸ್ತಿ.

ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದ ಚಿಕ್ಕ ಕುಟುಂಬದಲ್ಲಿ ಹುಟ್ಟಿ 8 ನೇ ತರಗತಿಯವರೆಗೆ ಹುಟ್ಟೂರಿನಲ್ಲಿ ಕಲೆತು ಆಳ್ವಾಸ್ ನುಡಿಸಿರಿಯಲ್ಲಿ ಹೈ ಜಂಪ್ ಆಟಗಾರನಾಗಿ ರಾಜ್ಯಮಟ್ಟದಲ್ಲಿ ಭಾಗವಹಿಸಿದರು. ಮನೆಯ ಜವಾಬ್ದಾರಿಯನ್ನ ಹೊತ್ತು ಓದನ್ನು ಅಲ್ಲಿಗೆ ನಿಲ್ಲಿಸಿ ಸಮಾಜ ಸೇವೆಯಲ್ಲಿ ನಿರತರಾಗಿ ಗೆಳೆಯರು ಸೈನ್ಯಕ್ಕೆ ಸೇರಲು ಸಿದ್ದತೆ ನಡೆಸಿದಾಗ ಗೆಳೆಯರ ನಿಂದನೆಗೆ ಒಳಗಾಗಿ 10ನೇ ತರಗತಿ ನೇರ ಪರಿಕ್ಷೇಯಲ್ಲಿ ಉತ್ತಿರ್ಣರಾಗಿ ಸೇನೆಗೆ ಸೇರಲು ಸಿದ್ಧತೆ ನಡೆಸಿ ಪಾಸ್ ಆದರೂ ಸಹ, ದ್ವಿಚಕ್ರ ವಾಹನದ ಅಪಘಾತದಲ್ಲಿ ಕೈ ಮತ್ತು ಮಂಡಿ ಚಿಪ್ಪಿನ ಲೀಗಾಮೆಂಟ್(2) ಕಟ್ಟಾಗಿ ಸೇನೆಗೆ ಹೋಗಲು ಆಗುವುದಿಲ್ಲ, ಅದ್ದರಿಂದ ಮನನೊಂದ ಅದೃಶಪ್ಪನನ್ನು ಅವರ ತಂದೆ ತಾಯಿ ಧೈರ್ಯ ನೀಡಿ ಅಲ್ಲಿ ಆಗದಿದ್ದರೇನು ಇಲ್ಲಿಯೇ ನಿನ್ನ ಸಮಾಜ ಸೇವೆ ಮಾಡು ಎಂದು ಸಮಾಧಾನ ಪಡಿಸುತ್ತಾರೆ.

ಮನೆಯವರ ಮಾತಿನಂತೆ ಸಮಾಜ ಸೇವೆಯಲ್ಲಿ ತೊಡಗಿರುವ ಅದೃಶಪ್ಪ ಊರಲ್ಲಿ ಪೋಟೋಗ್ರಾಫರ್ ವೃತ್ತಿಯನ್ನು ಪ್ರಾರಂಭಿಸಿ ಸಮಾಜಮುಖಿ ಕಾರ್ಯಗಳಲ್ಲಿ ಮುಂದಾಗಿ ಯಾರಾದರೂ ತೀರಿಕೊಂಡಾಗ ಶವ ಸಂಸ್ಕಾರದಲ್ಲಿ ಸಕ್ರೀಯವಾಗಿ ಸೇವೆ ಮಾಡುತ್ತಾ ಅನಾಥ ಆಶ್ರಮ ವೃದ್ಧಾಶ್ರಮ ಅನೇಕ ಕಡೆ ಧನ ಸಹಾಯ ಮಾಡುತ್ತಾ ಬಂದಿರುವ ಅದೃಶಪ್ಪ ಸತತ 14 ಬಾರಿ ರಕ್ತ ದಾನ ಮಾಡಿ ಅನೇಕ ಯುವಕರಿಗೆ ಮಾದರಿಯಾಗುತ್ತಾನೆ.

ಇಂದಿಗೂ ಯಾರಿಗಾದರೂ ರಕ್ತದ ಅವಶ್ಯಕತೆ ಇದ್ದರೆ ಅದೃಶಪ್ಪನವರಿಗೆ ಮೊದಲ ಪೋನ್ ಬರುತ್ತೆ, ಧಾರವಾಡದಲ್ಲಿ 2019ರಲ್ಲಿ ನಡೆದ ಬಹುಮಹಡಿ ಕಟ್ಟಡ ಕುಸಿತದಲ್ಲಿ 9 ಜನರನ್ನು ಮೊದಲಿಗನಾಗಿ ಜೀವ ರಕ್ಷಣೆ ಮಾಡಿದ ಕೀರ್ತಿ ಅದೃಶಪ್ಪನಿಗೆ ಸಲ್ಲುತ್ತದೆ.

ಇವರ ಸೇವೆಯನ್ನು ಕಂಡ ಆಗಿನ ಮಾನ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಗ್ಯಮಂತ್ರಿ ಶಿವಾನಂದ ಪಾಟೀಲ ಉಸ್ತುವಾರಿ ಸಚಿವರಾದ ಸಿ ಎಸ್ ಶಿವಳ್ಳಿ ಸಾಹೇಬರು ಜಿಲ್ಲಾ ಸರ್ಜನ್ ಅವರು ಮತ್ತೆ ಧಾರವಾಡ 71ರ ಶಾಸಕರಾದ ಅಮೃತ ದೇಸಾಯಿಯವರು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಅವರು ಕೂಡಾ ಅದೃಶಪ್ಪನವರಿಗೆ ಶ್ಲಾಘಿಸಿದರು.

ಮಾನ್ಯ ಮುಖ್ಯಮಂತ್ರಿಗಳು ಅದೃಶಪ್ಪನ ಬಯೋಡಾಟಾ ಪಡೆದು ಅವರಿಗೆ ಶೌರ್ಯ ಪ್ರಶಸ್ತಿಯನ್ನು ನೀಡುತ್ತೇವೆ ಎಂದು ಆಸ್ವಾಸನೆಯನ್ನು ಸಹ ನೀಡಿದ್ದರು ಆದರೆ ಇದುವರೆಗೂ ಸರ್ಕಾರದಿಂದ ಯಾವುದೂ ಪ್ರಶಸ್ತಿ ನೀಡಿರುವುದಿಲ್ಲಾ.

ಅದರ ಜೊತೆಗೆ ಕಲಾವಿದರಾದ ಅದೃಶಪ್ಪ 5 ನಾಟಕದಲ್ಲಿ ಬಣ್ಣ ಹಚ್ಚಿದ್ದು ಹೌದು ಪೋಟೋಗ್ರಾಫರ್ ಕಾರ್ಯ ನಿರ್ವಹಿಸುತ್ತ ಜೊತೆಗೆ 15 ಭಕ್ತಿ ಗೀತೆಗಳನ್ನು ಸ್ವತಃ ಬರೆದು ಹಾಡಿದ್ದಾರೆ. ಮನೆಯ ಜವಾಬ್ದಾರಿಯನ್ನು ಹೊತ್ತು ಅದರ ಜೊತೆಗೆ ನೂರಾರು ವೇದಿಕೆಗಳಲ್ಲಿ ತಮ್ಮ ಹಾಸ್ಯನುಡಿಗಳಲ್ಲಿ ಜನರನ್ನ ನಗಿಸುತ್ತ ಸ್ಕೂಲ್ ಗಳಲ್ಲಿ ಮಕ್ಕಳಿಗೆ ನೀತಿ ಬೋಧನೆಯನ್ನು ಮಾಡುತ್ತಾ, ಜನರ ಮನಸ್ಸಿನಲ್ಲಿ ವಿಶೇಷ ಎನಿಸಿಕಳ್ಳುತ್ತಾರೆ.

ತಂದೆ ಕಳೆದುಕೊಂಡ ಅದೃಶಪ್ಪ ತನ್ನ ಮನೆ ನೋಡಿಕೊಳ್ಳುವುದರ
ಜೊತೆಯಲ್ಲಿ ಕಲಾಸೇವೆ ಸಂಸ್ಕೃತಿಕ ಕಾರ್ಯಕ್ರಮ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.

ಆಸ್ಪತ್ರೆಗಳಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದಲ್ಲಿ ಗೆಳೆಯರಿಂದ ರಕ್ತದಾನ ಮಾಡಿಸುವುದು.

ನಿರಂತರ ಕಲಾ ಸೇವೆಯಲ್ಲಿ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅದೃಶಪ್ಪ ಬಸಪ್ಪ ಸಲಕಿನಕೊಪ್ಪ ಇವರಿಗೆ
ಇಲ್ಲಿಯವರೆಗೆ ಒಂದು ರಾಷ್ಟ್ರೀಯ ಪ್ರಶಸ್ತಿ ಆರು ರಾಜ್ಯ ಪ್ರಶಸ್ತಿಗಳು ದೊರೆತಿವೆ.

ಇನ್ನು ಹೆಚ್ಚಿನ ಸಾಮಾಜಿಕ ಸಮಾಜಮುಖೀ ಕೆಲಸಗಳು ಇವರಿಂದ ಆಗಲಿ ಹಾಗೂ ಹೆಚ್ಚು ಹೆಚ್ಚು ಪ್ರಶಸ್ತಿಗಳು ಇವರಿಗೆ ಸಿಗುವಂತಾಗಲಿ ಎಂದು ಪವರ್ ಸಿಟಿ ನ್ಯೂಸ್ ಕನ್ನಡ ಹಾರೈಸುತ್ತಿದೆ.

Related Articles

Leave a Reply

Your email address will not be published. Required fields are marked *

Back to top button