ಸ್ಥಳೀಯ ಸುದ್ದಿ

ಪಕ್ಷದ ಸಂಘಟನೆಗಾಗಿ ಮಹತ್ವದ ಕಾರ್ಯಕಾರಿಣಿ

ಧಾರವಾಡ

BJP ಯುವ ಮೋರ್ಚಾ ಧಾರವಾಡ ಜಿಲ್ಲೆಯ…ಜಿಲ್ಲಾ ಯುವ ಮೋರ್ಚಾದ ಎರಡು ದಿನದ ಸಹಲ್ ಹಾಗೂ ಕಾರ್ಯಕಾರಿಣಿ ಸಭೆಯನ್ನು ಮನಗುಂಡಿ ಗ್ರಾಮದಲ್ಲಿನ, ಮಾಜಿ ಶಾಸಕರಾದ ಶ್ರೀ ಚಂದ್ರಕಾಂತ ಬೆಲ್ಲದ ಇವರ ಫಾರ್ಮ್ ಹೌಸ್ ನಲ್ಲಿ ಮನರಂಜನಾ ಕ್ರೀಡೆಯ ಮೂಲಕ ಪ್ರಾರಂಭ ಮಾಡಲಾಯಿತು.

ಮೊದಲ ದಿನ ಶಾಸಕರಾದ ಶ್ರೀ ಅಮೃತ ದೇಸಾಯಿಯವರು ಯುವಕರ ಜೊತೆಗೆ ಸಂಜೆ ಸಂವಾದ ಮಾಡಿ ತಮ್ಮ ಕ್ಷೇತ್ರದಲ್ಲಿ ಪಕ್ಷದ ಸ್ಥಿತಿಗತಿ ಕೇಳಿ, ಅದರಲ್ಲಿ ಯುವಮೋರ್ಚಾದ ಪಾತ್ರ ಏನು ಎಂಬುದನ್ನು ತಿಳಿಸಿದರು.

ಎರಡನೇ ದಿನ ಪಕ್ಷದಲ್ಲಿ ಯುವ ಮೋರ್ಚಾ ಮಾಡಬೇಕಾದ ಕಾರ್ಯದ ಬಗ್ಗೆ ಶಾಸಕರಾದ ಶ್ರೀ ಸಿ.ಎಮ್.ನಿಂಬಣ್ಣನವರ ತಿಳಿಸಿದರು.

ನಂತರ ಕಾರ್ಯಕಾರಿಣಿ ಸಭೆಯನ್ನು ಸಸಿಗೆ ನೀರು ಹಾಕುವ ಮೂಲಕ ಸಚಿವರಾದ ಶ್ರೀ ಶಂಕರ ಪಾಟೀಲ ಮುನೇನಕೊಪ್ಪ ಉದ್ಘಾಟನೆ ಮಾಡಿದರು

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಸವರಾಜ ಕುಂದಗೂಳಮಠ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ, ರಾಜ್ಯ ಕಾರ್ಯದರ್ಶಿ ಈರಣ್ಣಾ ಅಂಗಡಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಬಸವಾ ಸೇರಿದಂತೆ ಜಿಲ್ಲೆಯ ಎಲ್ಲ ಯುವ ಮೋರ್ಚಾ ಪದಾಧಿಕಾರಿಗಳ ಹಾಗೂ ಮಂಡಲ ಯುವ ಮೋರ್ಚಾ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button